Monday, December 29, 2008

'ಚಂದ' ಯಾನದ ಬಗ್ಗೆ ಚೆಂದದ ಪುಸ್ತಕ

ಚಿಂತನಗಂಗಾ ಪ್ರಕಾಶನದ ಚಂದ್ರಯಾನ ಪುಸ್ತಕ ಇದೀಗ ಮಾರುಕಟ್ಟೆಯಲ್ಲಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚು ಪ್ರತಿಕ್ರಿಯೆ, ಮೆಚ್ಚುಗೆ ಕೇಳಿ ಬರುತ್ತಿದೆ. ಅನೇಕ ಮಿತ್ರರು ತಮ್ಮ ಬ್ಲಾಗ್ ಗಳಲ್ಲಿ ಪುಸ್ತಕದ ಬಗ್ಗೆ ಬರೆಯುತ್ತಿದ್ದಾರೆ. ಬಾಗಲಕೋಟೆಯ ವಿ.ಕ.ಮಿತ್ರ ರವಿರಾಜ ಗಲಗಲಿ ತಮ್ಮ http://ravirajgalagali.blogspot.com/ ಬ್ಲಾಗ್ ನಲ್ಲಿ ಪುಸ್ತಕದ ಬಗ್ಗೆ ಹೀಗೆ ಬರೆದಿದ್ದಾರೆ.
'ಸ್ನೇಹಿತ, ಪತ್ರಕರ್ತ ಶಿವಪ್ರಸಾದ್ ಹೊಸ ಪುಸ್ತಕ ಬರೆದಿದ್ದಾನೆ ಹೆಸರು ಚಂದ್ರಯಾನ. ಚಂದಮಾಮನ ಬಯಸುವ ಮಗುವಿನ ಕನವರಿಕೆ, ಚಂದ್ರನೆಂಬ ಗ್ರಹದ ಬಗ್ಗೆ ವಿಜ್ಞಾನಿಯ ಕುತೂಹಲ, ಚಂದ್ರನಲ್ಲಿ ಪ್ರಿಯತಮೆ ಕಾಣುವ ಪ್ರಿಯಕರನ ಪ್ರೀತಿ, ಆಕಾಶದಲ್ಲೊಮ್ಮೆ ದಿಟ್ಟಿಸಿ ಚಂದ್ರನ ಇರುವಿಕೆ ಬಗ್ಗೆ ಖಚಿತಪಡಿಸಿಕೊಳ್ಳುವ ವೃದ್ಧರ ಬಯಕೆ ಎಲ್ಲವೂ ಇಲ್ಲಿ ದಾಖಲಾಗಿದೆ.
ಚಂದ್ರನ ಬಗ್ಗೆ ಬರೆಯಬಹುದಾದ ಎಲ್ಲವನ್ನೂ ಇಲ್ಲಿ ಅಕ್ಷರ ರೂಪದಲ್ಲಿ ಕಾಣಿಸಲಾಗಿದೆ. ಹೊಸದಿಲ್ಲಿಯಲ್ಲಿ ಟಿವಿ೯ ವರದಿಗಾರನಾಗಿರುವ ಶಿವಾ ಬಿಡುವು ದುರುಪಯೋಗ ಮಾಡದೆ ಸದುಪಯೋಗ ಮಾಡಿಕೊಂಡಿದ್ದಾನೆ ಎಂಬುದಕ್ಕೆ ಈ ಪುಸ್ತಕ ಸಾಕ್ಷಿ. ಅಂದ ಹಾಗೆ ಪುಸ್ತಕ ಸದ್ಯ ಮಾರುಕಟ್ಟೆಯಲ್ಲಿದೆ. ಎಲ್ಲ ಮಳಿಗೆಗಳಲ್ಲೂ ಲಭ್ಯ. ನೀವೂ ಕೊಂಡು ಓದಿ, ಸಂತಸಪಡಬಹುದು ಎಂದು ಬರೆದಿದ್ದಾರೆ.
ಥ್ಯಾಂಕ್ಸ್.

Monday, December 22, 2008

2. ತುಂಬಾ ತೀರದಲ್ಲಿ...

ಅಷ್ಟಕ್ಕೂ ತುಂಬಾವನ್ನೇ ಭಾರತದ ಪ್ರಥಮ ಉಡಾವಣಾ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಂಡದ್ದಾದರೂ ಏಕೆ? ಅದಕ್ಕೂ ಒಂದು ವೈಜ್ಞಾನಿಕ ಕಾರಣವಿದೆ. ಈ ಗ್ರಾಮ ಭೂಮಿಯ ಮ್ಯಾಗ್ನೆಟಿಕ್ ಈಕ್ವೇಟರ್ ವಲಯದಲ್ಲಿದೆ. ಇಲ್ಲಿ ಆಯಸ್ಕಾಂತೀಯ ಅಲೆಗಳ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ಇದು ವಾತಾವರಣದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲು ಹಾಗೂ ಉಪಹಗ್ರಹ ಉಡಾವಣೆಯಂತಹ ಕೆಲಸಗಳಿಗೆ ಅನುಕೂಲವಾಗುವಂತಿತ್ತು. ಇಂತಹ ಹತ್ತು ಹಲವಾರು ಅನುಕೂಲತೆಗಳು ತುಂಬಾವನ್ನು ಅಂತಾರಾಷ್ಟ್ರೀಯ ಮಟ್ಟದ ಸೌಂಡಿಂಗ್ ರಾಕೆಟ್ ಉಡಾವಣಾ ಸ್ಥಳವನ್ನಾಗಿ ಮಾರ್ಪಡಿಸಿವೆ. ಮೊದಲ ಯಶಸ್ಸಿನ ನಂತರ ಇಲ್ಲಿ ಫ್ರ್ರಾನ್ಸ್, ಜರ್ಮನಿ, ಜಪಾನ್, ರಷ್ಯಾ, ಬಲ್ಗೇರಿಯಾ ಸೇರಿದಂತೆ ವಿವಿಧ ದೇಶಗಳ ವಿಜ್ಞಾನಿಗಳು ಬಂದು ವೈಜ್ಞಾನಿಕ ಪರೀಕ್ಷೆಗಳಲ್ಲಿ, ಉಡಾವಣೆಗಳಲ್ಲಿ ಭಾಗವಹಿಸಿದ್ದಾರೆ.ತುಂಬಾ ಗ್ರಾಮವನ್ನೇ ಅಂತಿಮವಾಗಿ ಆಯ್ಕೆ ಮಾಡುವ ಮುನ್ನ ಸಾರಭಾಯ್ ಇನ್ನೂ ಹಲವಾರು ಗ್ರಾಮಗಳ ಪರಿಶೀಲನೆ ನಡೆಸಿದ್ದರು. ಯಾವ ಗ್ರಾಮವನ್ನು ಆಯ್ಕೆ ಮಾಡುವುದು ಎಂಬ ಗೊಂದಲದಲ್ಲಿ ಎಲ್ಲರೂ ಇದ್ದರು. ಕೊನೆಗೆ ಚಿಟ್ನಿಸ್ 'ತುಂಬಾ' ಎಂಬ ಗ್ರಾಮದ ಬಗ್ಗೆ ಹೇಳಿದರು. ಅಲ್ಲಿ ತುಂಬೆ ಹೂವಿನ ಗಿಡಗಳು ವಿಪರೀತ ಬೆಳೆಯುತ್ತವೆ. ಮಲಯಾಳಂನಲ್ಲಿ ತುಂಬಾ, ತಮಿಳಿನಲ್ಲಿ ತುಂಬೈ ಹಾಗೂ ಕನ್ನಡದಲ್ಲಿ ತುಂಬೆ ಅಂದರೆ ಬಿಳಿಯಾದ ಹೂವುಗಳನ್ನು ಬಿಡುವ ಔಷಧೀಯ ಗುಣಗಳುಳ್ಳ ಸಸ್ಯ. ಈ ಗಿಡಗಳಿಂದಾಗಿ ಆ ಗ್ರಾಮಕ್ಕೆ ತುಂಬಾ ಎಂಬ ಹೆಸರು ಬಂದಿದೆ. ಅಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲ. ಮೇಲಾಗಿ ಅಲ್ಲೊಂದು ಚಚರ್್ ಇದೆ. ಅದು ಕೂಡಾ ನಮಗೆ ತೊಡಕಾಗಬಹುದು ಎಂದು ಚಿಟ್ನಿಸ್ ಹೇಳಿದ್ದರು.
ಆದರೆ ಸಾರಾಭಾಯಿಯವರ ಮನದಲ್ಲಿ ವಿಶ್ವಾಸವಿತ್ತು. ತುಂಬಾ ಗ್ರಾಮದ ವೀಕ್ಷಣೆಗೆ ಹೊರಟರು. ಅದೃಷ್ಟ ತುಂಬಾ ಗ್ರಾಮಕ್ಕಿತ್ತು. ಅಲ್ಲಿ ಭಾರತದ ಮಹತ್ತರ ವೈಜ್ಞಾನಿಕ ಸಂಸ್ಥೆಗೆ ಬೀಜಾಂಕುರವಾಗಲಿತ್ತು. ಎಲ್ಲವನ್ನೂ ವೀಕ್ಷಿಸಿದ ಸಾರಾಭಾಯ್ ಇದೇ ಸೂಕ್ತ ಸ್ಥಳ ಎಂದು ನಿರ್ಧರಿಸಿದ್ದರು. ಚಚರ್್ ಇರುವುದರಿಂದ ಯಾವುದೇ ಸಮಸ್ಯೆಯಾಗಲಿಲ್ಲ. ಬದಲಿಗೆ ವರದಾನವೇ ಆಯ್ತು!.ಅಂದು ತುಂಬಾ ಗ್ರಾಮ ಇದ್ದ ಸ್ಥಿತಿಯನ್ನು ನೋಡಿದ್ದವರು ಭಾರತೀಯ ವಿಜ್ಞಾನಿಗಳ ಆಯ್ಕೆಗೆ ನಗದೇ ಇರುತ್ತಿರಲಿಲ್ಲ. ಅಲ್ಲಿದ್ದದ್ದಾರು ಏನು? ವಿದೇಶದ ಉತ್ತಮ ಸಂಸ್ಥೆ, ಸ್ಥಳ, ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಮುತ್ತುನಾಯಗಂ, ಭಾವಸರ್, ಪ್ರೋ. ಚಿಟ್ನಿಸ್, ವಸಂತ್ ಗೌರಿಕರ್, ಅರವಮುದನ್ ಇವರು ಉತ್ಸಾಹದಿಂದ ದೇಶಕ್ಕಾಗಿ ಕೆಲಸ ಮಾಡೋಣ ಎಂದು ತುಂಬಾಗೆ ಬಂದಿಳಿದಾಗ ಅವರನ್ನು ಸ್ವಾಗತಿಸಿದ್ದಾರೂ ಏನು?ರಸ್ತೆಗಳೇ ಇಲ್ಲದೆ ಕುಗ್ರಾಮ. ನೂರಿನ್ನೂರು ಮೀನುಗಾರರ ಗುಡಿಸಲು ಬಿಟ್ಟರೆ ಅಸಲಿಗೆ ಮನೆಗಳೇ ಇಲ್ಲ. ಸಮುದ್ರ ತೀರದಲ್ಲಿ ಅಲ್ಲಲ್ಲಿ ಕಟ್ಟಿ ಹಾಕಿದ್ದ ಮೀನುಗಾರರ ದೋಣಿಗಳು. ಸುತ್ತಲೂ ಆಗಾಧವಾಗಿ ಬೆಳೆದು ನಿಂತು, ರಾತ್ರಿಯಲ್ಲಿ ಸರಬರ ಸದ್ದು ಮಾಡುತ್ತಾ ಹೆದರಿಕೆ ಹುಟ್ಟಿಸುವಂತಿದ್ದ ತೆಂಗಿನ ಮರಗಳು. ಸ್ನಾನ-ಶೌಚಾಲಯಗಳಿಗೂ ಪರದಾಡಬೇಕಾದ ಪರಿಸ್ಥಿತಿ. ನೆಟ್ಟಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ವಿದ್ಯುತ್ ದೀಪಗಳಿಲ್ಲ. ಸಂಚಾರಿ ವ್ಯವಸ್ಥೆ ಇಲ್ಲ. ಆ ಹಳ್ಳಿಗರಿಗೆ ಗ್ರಾಮದಲ್ಲಿದ್ದ ಪುಟ್ಟ ಚಚರ್್ ಏಕಮಾತ್ರ ಬೃಹತ್ ಕಟ್ಟಡ! ಅದರ ಪಕ್ಕದಲ್ಲೇ ಬಿಷಪ್ಪರ ಸಣ್ಣ ಮನೆ. ಇದರ ಹೊರತಾಗಿ ಅಲ್ಲಿ ಧಾರಳವಾಗಿ ಇದ್ದದ್ದು ಸಮುದ್ರದ ನೀರು! ಕೇಳಿ ಬರುತ್ತಿತ್ತು ಭೋರೆನ್ನುವ ಅಲೆಗಳ ಮೊರೆತ! ಇಷ್ಟೇ!!.ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮಾಡುವುದಾದರೂ ಹೇಗೆ? ಅಂತಹ ಸ್ಥಳದಲ್ಲಿ ಇರುವುದಾದರೂ ಎಷ್ಟು ದಿನ? ಆದರೆ ಭಾರತದ ಅದೃಷ್ಟ ಚನ್ನಾಗಿತ್ತು. ಅದಕ್ಕೆ ವಿಕ್ರಂ ಸಾರಾಭಾಯಿಯವರಂತಹ ವಿಜ್ಞಾನಿ ಇದ್ದರು. ವಿಕ್ರಂ ಸಾರಾಭಾಯಿಯವರನ್ನು ನಂಬಿ ಬಂದಿದ್ದ ಉತ್ಸಾಹಿ ವಿಜ್ಞಾನಿಗಳ ಪಡೆ ಇತ್ತು. ಅವರಿಗೆ ಇವೆಲ್ಲ ಅಡಚಣೆಗಳಾಗಿ ಕಾಣಲೇ ಇಲ್ಲ! ಇವರ ಉತ್ಸಾಹ, ದೇಶ ಪ್ರೇಮದಿಂದಾಗಿ, ಈ ಕುಗ್ರಾಮದಲ್ಲೇ ಭಾರತದ ಹೆಮ್ಮೆಯ ಸಂಸ್ಥೆಗೆ ಬೀಜಾಂಕುರವಾಗಲಿತ್ತು.ಅವರೆಲ್ಲ ಸೇರಿ ಬಿಷಪ್ಪರಿಗೆ ಮನವಿ ಮಾಡಿ ಅಲ್ಲಿದ್ದ ಚರ್ಚನ್ನೇ ವಿಜ್ಞಾನಿಗಳ ಮುಖ್ಯ ಕಚೇರಿಯನ್ನಾಗಿ ಮಾಡಿಕೊಂಡರು. ಬಿಷಪ್ಪರ ಮನೆ ವಕರ್್ಶಾಪ್ ಆಗಿ ಮಾಪರ್ಾಡಾಯ್ತು! ಆದರೆ ರಾಕೆಟ್ ಜೋಡಿಸುವುದಾದರೂ ಎಲ್ಲಿ? ಇದಕ್ಕಾಗಿ ಲ್ಯಾಬೋರೇಟರಿ ಎಲ್ಲಿಂದ ತರುವುದು? ಅದಕ್ಕೂ ನಮ್ಮ ವಿಜ್ಞಾನಿಗಳು ಪರಿಹಾರ ಕಂಡುಕೊಂಡುಬಿಟ್ಟರು! ಪಕ್ಕದಲ್ಲೇ ಇದ್ದ ದನದ ಕೊಟ್ಟಿಗೆಯೇ ಲ್ಯಾಬೋರೇಟರಿಯಾಯ್ತ!! ಯು.ಕೆ.ಯ ಆಟಮಿಕ್ ಎನಜರ್ಿ ಅಥಾರಿಟಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು, ಅದನ್ನು ಬಿಟ್ಟು ಭಾರತಕ್ಕೆ ಬಂದ ವಸಂತ್ ಗೌರೀಕರ್ ಮುಂದೊಮ್ಮೆ ಈ ಬಗ್ಗೆ ತಮ್ಮ ಅನುಭವ ಹೀಗೆ ಹೇಳಿಕೊಂಡಿದ್ದರು... 'ಕೆಲಸ ಬಿಟ್ಟು ಅಲ್ಲಿಂದ ಬಂದಾಗ ನಾವು ಕಠಿಣ ಹಾದಿಯಲ್ಲಿ ಸಾಗಬೇಕಿದೆ ಎಂಬ ಕಲ್ಪನೆ ಇತ್ತು. ಏನೂ ಇಲ್ಲದೆ ಕೆಲಸ ಆರಂಭಿಸಬೇಕು ಎಂದು ತಿಳಿದಿತ್ತು. ಆದರೆ ನಾನು ಬಂದಾಗ ಅಲ್ಲಿನ ಪರಿಸ್ಥಿತಿ ನೋಡಿ ಗಾಭರಿಯಾಗಿದ್ದೆ. ಅಂತಹ ಸನ್ನಿವೇಶ ಎದುರಿಸಲು ನಾನು ಮಾನಸಿಕವಾಗಿ ಸಿದ್ಧನಾಗಿರಲೇ ಇಲ್ಲ. ನಾವೆಲ್ಲ ಆ ಚಚರ್್ನೊಳಗೆ ಕುಳಿತು ಕೆಲಸ ಮಾಡುತ್ತಿದ್ದೆವು. ಅದರ ಪಕ್ಕದಲ್ಲೇ ದನದ ಕೊಟ್ಟಿಗೆ ಇತ್ತು. ಆಗ ನನಗೆ ನನ್ನ ಲ್ಯಾಬೋರೇಟರಿ ತೋರಿಸಿದರು. ಅದೇ ಆ ದನದ ಕೊಟ್ಟಿಗೆ! ಅಷ್ಟೇ ಅಲ್ಲ... ಈ ಲ್ಯಾಬೋರೇಟರಿ ಜೊತೆಗೆ ಬೋನಸ್ ಆಗಿ ಮತ್ತೊಂದು ಸ್ಥಳವನ್ನೂ ಸಹ ನಾನು ಬಳಕೆ ಮಾಡಬಹುದು ಎಂದು ತೋರಿಸಿದರು. ಅದು ದನಗಳ ಮೇವು ಸಂಗ್ರಹಿಸುವ ಕೊಠಡಿ. ಹೀಗೆ ನನ್ನ ಲ್ಯಾಬೋರೇಟರಿ ಸಿದ್ಧವಾಗಿತ್ತು!'.ವಿಕ್ರಂ ಸಾರಾಭಾಯಿಯವರ ವ್ಯಕ್ತಿತ್ವ ಅವರನ್ನು ಅತ್ಯಾಧುನಿಕ ಲ್ಯಾಬೋರೇಟರಿ ಬಿಟ್ಟು ಬಂದು ದನದ ಕೊಟ್ಟಿಗೆಯಲ್ಲಿ ಭಾರತದ ಪ್ರಥಮ ರಾಕೆಟ್ ನಿಮರ್ಾಣದಲ್ಲಿ ತೊಡಗುವಂತೆ ಮಾಡಿತ್ತು. ಹೀಗೆ ಎಲ್ಲ ತೊಡಕುಗಳನ್ನೂ ಮೀರಿ ನಮ್ಮ ವಿಜ್ಞಾನಿಗಳು ತಮ್ಮ ಕೆಲಸ ಆರಂಭಿಸಿದ್ದರು. ದಿನಗಳೆದಂತೆ ಅಲ್ಲಿನ ಪರಿಸರಕ್ಕೆ ಹೊಂದಿಕೊಂಡ ವಿಜ್ಞಾನಿಗಳು ರಾಕೆಟ್ ಜೋಡಣೆ ಆರಂಭಿಸಿದರು. 6 ತಿಂಗಳ ಶ್ರಮದ ನಂತರ ರಾಕೆಟ್ ಉಡಾವಣೆಗೆ ಸಿದ್ಧವಾಗಿತ್ತು. ತುಂಬಾ ಎಂಬ ಕುಗ್ರಾಮ ಸದ್ದಿಲ್ಲದೆ ಇತಿಹಾಸ ನಿಮರ್ಿಸಲು ಸಜ್ಜಾಗಿತ್ತು. ಇಡೀ ರಾಕೆಟ್ ಜೋಡಿಸುವುದು, ಅದರಲ್ಲಿ ಬೇಕಾದ ಸಾಧನಗಳನ್ನು ಅಳವಡಿಸುವುದೆಲ್ಲ ನಡೆದದ್ದು ತುಂಬಾದಲ್ಲಿದ್ದ ಸೇಂಟ್ ಮೇರಿ ಮೆಗ್ಡಾಲನ್ ಚಚರ್್ನಲ್ಲಿ. ಈಗ ಈ ಚಚರ್್ ಕೇಂದ್ರ ಸರಕಾರದ ಸುಪದರ್ಿಯಲ್ಲಿದೆ. ಇದನ್ನು ಇಸ್ರೊದ ಇತಿಹಾಸ ಸಾರುವ ಸುಂದರವಾದ ಮ್ಯೂಸಿಯಂ ಆಗಿ ಪರಿವತರ್ಿಸಿದ್ದಾರೆ. ನಿಮರ್ಾಣದಲ್ಲಿ ಅನೇಕ ತೊಂದರೆಗಳು, ಕೊನೆ ಕ್ಷಣದ ಆತಂಕಗಳನ್ನು ಎದುರಿಸಬೇಕಾಗಿತ್ತು. ಇಡೀ ರಾಕೆಟ್ನ ಭಾಗಗಳನ್ನು ನಿಗದಿತ ಸ್ಥಳಕ್ಕೆ ಸಾಗಿಸಲು ಅವರೆಲ್ಲ ಹರ ಸಾಹಸ ಮಾಡಬೇಕಾಯಿತು. ಇದಕ್ಕಾಗಿ ಯಾವುದೇ ವಾಹನಗಳ ಸೌಲಭ್ಯ ಇರಲಿಲ್ಲ. ಆಗ ಅವರಿಗೆ ರಾಕೆಟ್ ಸಾಗಿಸಲು ಲಭ್ಯವಾದ ಏಕೈಕ ವಾಹನ ಸೈಕಲ್ಲು! ಆಗ ಸೈಕಲ್ಲುಗಳು ತೀರಾ ಅಪರೂಪ. ಸೈಕಲ್ ಇತ್ತು ಎಂದರೆ ಆತ ಇಡೀ ಗ್ರಾಮದ ಗಣ್ಯ ವ್ಯಕ್ತಿ ಎಂದೇ ಅರ್ಥ! ಸಿಕ್ಕ ಸೈಕಲ್ಲನ್ನೇ ಬಳಸಿ, ಅದರ ಮೇಲೆ ರಾಕೆಟ್ನ ವಿವಿಧ ಭಾಗಗಳನ್ನು ಉಡಾವಣಾ ಸ್ಥಳಕ್ಕೆ ಸಾಗಿಸಲಾಯಿತು. ಇಂದಿಗೂ ಆ ಫೋಟೋಗಳನ್ನು ನೋಡಿದರೆ ನಮ್ಮ ವಿಜ್ಞಾನಿಗಳು ಹೇಗೆ ಯಾವುದೇ ರೀತಿಯ ಹೆಚ್ಚಿನ ಸೌಲಭ್ಯಗಳಿಲ್ಲದೆ ಒಂದು ಧ್ಯೇಯ, ಉದ್ದೇಶಕ್ಕಾಗಿ ದುಡಿದಿದ್ದಾರೆ ಎಂದು ಹೆಮ್ಮೆಯಾಗದಿರದು.
ಅಮೇರಿಕಾದಿಂದ ತರಿಸಿಕೊಂಡಿದ್ದ ರಾಕೆಟ್ನಲ್ಲಿ ಪ್ರೆಂಚ್ನಿಂದ ಆಮದು ಮಾಡಿಕೊಂಡಿದ್ದ ಪೇಲೋಡ್ ಸಾಧನ ಸರಿಯಾಗಿ ಕೂರುತ್ತಿರಲಿಲ್ಲ. ಹೀಗಾಗಿ ಹೆಚ್ಚು ವೆಲ್ಡಿಂಗ್ ಮಾಡಬೇಕಾಗಿ ಬಂದಿತ್ತು. ಈ ರೀತಿ ಹೆಚ್ಚು ವೆಲ್ಡ್ ಮಾಡುವುದು ಅಪಾಯಕಾರಿ ಎಂದು ರೇಂಜ್ ಟೆಸ್ಟ್ ಡೈರೆಕ್ಟರ್ ಎಚ್.ಜಿ.ಎಸ್.ಮೂತಿ೵ ಎಚ್ಚರಿಸಿದ್ದರು. 'ನೀವು ಹೆಚ್ಚು ವೆಲ್ಡ್ ಮಾಡಿದ್ದೇ ಆದಲ್ಲಿ ಇಡೀ ಉಡಾವಣೆಯನ್ನೇ ಸ್ಥಗಿತಗೊಳಿಸಬೇಕಾಗಿ ಬರುತ್ತದೆ' ಎಂದು ಬಿಟ್ಟರು. ಕೊನೆಗೆ ಇದಕ್ಕೆ ಭಾವಸರ್ ಒಂದು ಪರಿಹಾರ ಸೂಚಿಸಿದರು. ಅದು ಅಲ್ಲಿದ್ದ ವಿಕ್ರಂ ಸಾರಾಭಾಯ್ ಹಾಗೂ ಕಲಾಂ ಅವರಿಗೂ ಒಪ್ಪಿಗೆಯಾಯಿತು. ಫ್ರೆಂಚ್ ಪೇಲೋಡ್ ಸಾಧನ ಅಮೆರಿಕಾದ ರಾಕೆಟ್ಗೆ ಹೊಂದಿಕೊಳ್ಳುವವರೆಗೆ ಅದನ್ನು ಉಜ್ಜಿ ಉಜ್ಜಿ ಸವೆಸುವುದೇ ಆ ಉಪಾಯ! ತಾಸುಗಟ್ಟಲೆ ಅದನ್ನು ಉಜ್ಜಿ, ರಾಕೆಟ್ಗೆ ಹೊಂದಿಕೊಳ್ಳುವಂತೆ ಮಾಡಲಾಯಿತು. ಇಡೀ ಯೋಜನೆ ಭಾರತದ ಮಟ್ಟಿಗೆ ಅತಿ ಮಹತ್ತರವಾದದ್ದು. ಅದರ ಫೋಟೋಗಳೆ ಇಲ್ಲದಿದ್ದರೆ ಹೇಗೆ? ಇದು ಭಾವಸರ್ ಅವರ ಚಿಂತೆ. ಫೋಟೋ ತೆಗೆಯಲಿಕ್ಕಾಗಿಯೇ ಅವರು ಕನ್ಯಾಕುಮಾರಿಯಲ್ಲಿದ್ದ ಕೇರಳ ಹೌಸ್, ಪಲಾಯಂಕೊಟ್ಟ, ಕೊಟ್ಟಾಯಂ, ಹಾಗೂ ಕೊಡೈಕೆನಾಲ್ಗಳಲ್ಲಿ ವಿವಿಧ ಕಾಲೇಜು ಕಟ್ಟಡಗಳ ಮೇಲೆ ಒಟ್ಟು ನಾಲ್ಕು ಸ್ಥಳಗಳನ್ನು ಗುರುತಿಸಿದ್ದರು. ಈ ನಾಲ್ಕೂ ಕ್ಯಾಮೆರಾಗಳು ಒಟ್ಟಿಗೆ ಫೋಟೋ ತೆಗೆಯಬೇಕಾಗಿತ್ತು. ಆದರೆ ಪರಸ್ಪರ ಸಂಪರ್ಕವಿಲ್ಲದೆ, ಉಡಾವಣಾ ಸಮಯ ತಿಳಿಸಿ, ಫೊಟೋ ತೆಗೆಯಲು ಸಿದ್ದವಾಗಿರಲು ಸೂಚನೆ ನೀಡುವುದಾದರೂ ಹೇಗೆ? ಆಗ ದೂರವಾಣಿ ಇಲಾಖೆ ತನ್ನ ಸಹಾಯ ಹಸ್ತ ಚಾಚಿತು. ಉಡಾವಣೆಗೂ ಒಂದು ವಾರ ಮೊದಲಿನಿಂದಲೇ ಆಗಸವನ್ನು ಕುತೂಹಲದಿಂದ ಪರೀಕ್ಷಿಸಲಾಗುತ್ತಿತ್ತು. ಮಳೆ ಸುರಿಯಬಹುದೇ? ಮೋಡ ಕವಿಯಬಹುದೇ ಎಂದು ಪರಿಸ್ಪರ ಚಚರ್ಿಸುತ್ತಿದ್ದರು. ಆಗಿನ್ನೂ ದಿಕ್ಕು-ದೆಸೆ ತಿಳಿಸುವ ರಾಡಾರ್ಗಳಾಗಲಿ, ಕಂಪ್ಯೂಟರ್ ನಿಯಂತ್ರಿತ ಉಪಕರಣಗಳಾಗಲಿ, ಇರಲಿಲ್ಲ. ಹೀಗಾಗಿ ರೇಂಜ್ ಟೆಸ್ಟ್ ಡೈರೆಕ್ಟರ್ ಎಚ್.ಜಿ.ಎಸ್.ಮೂತರ್ಿ ಒಂದು ನಿಗದಿತ ದಿಕ್ಕನ್ನು ಗುರುತಿಸಿ, ಆ ಕೋನದಿಂದಲೇ ರಾಕೆಟ್ ಉಡಾಯಿಸುವುದು ಎಂದು ಸೂಚಿಸಿದ್ದರು. ಇದರಿಂದ ಒಂದು ವೇಳೆ ಪರೀಕ್ಷೆ ವಿಫಲವಾಗಿ ರಾಕೆಟ್ ಬಿದ್ದಲ್ಲಿ, ಅದು ಜನ ವಸತಿ ಪ್ರದೇಶ ಅಥವಾ ಮನೆಗಳ ಮೇಲೆ ಬೀಳದಿರಲಿ ಎಂದು ಈ ಎಚ್ಚರಿಕೆ ತೆಗೆದುಕೊಳ್ಳಲಾಗಿತ್ತು. ಈ ಎಲ್ಲಾ ಅಡ್ಡಿ, ಆತಂಕಗಳನ್ನು ಮೀರಿ, ಉಡಾವಣೆ ಯಶಸ್ವಿಯಾಗಿತ್ತು. ಕ್ಯಾಮೆರಾದಲ್ಲಿ ಕೂಡ ಫೋಟೋಗಳನ್ನು ಸೆರೆ ಹಿಡಿಯಲಾಗಿತ್ತು. ಅನೇಕರ ಶ್ರಮ, ಸಹಕಾರದಿಂದ ಭಾರತದ ಪ್ರಥಮ ರಾಕೆಟ್ ಉಡಾವಣೆ ಯಶಸ್ವಿಯಾಗಿತ್ತು.
ಗಮನ ಸೆಳೆದ ಸಾಧನೆ: ಹಾಗೆ ನೋಡಿದರೆ ಭಾರತದ ಪ್ರಥಮ ರಾಕೆಟ್ ಉಡಾವಣೆ ಪ್ರಯತ್ನ ಒಂದು ರೀತಿ ಅಂತಾರಾಷ್ಟ್ರೀಯ ಯೋಜನೆ ಎನ್ನಬಹುದು. ನೈಕ್ ಅಪಾಚೆ ರಾಕೆಟ್ ಅಮೆರಿಕಾದಿಂದ ಆಮದು ಮಾಡಿಕೊಳ್ಳಲಾಗಿತ್ತು. `ಸೋಡಿಯಂ ವೇಪರ್ ಫ್ರೆಂಚ್'ನಿಂದ ಬಂದಿದ್ದವು. ಉಡಾವಣೆ ಸಂದರ್ಭದಲ್ಲಿ ರೇಂಜ್ ಕ್ಲಿಯರೆನ್ಸ್ ನೀಡಿದ್ದು ಸೋವಿಯತ್ ಯೂನಿಯನ್ ಎಂ1-4 ಹೆಲಿಕಾಪ್ಟರ್. ಹೀಗೆ ಅನೇಕ ದೇಶಗಳ ಸಹಾಯವನ್ನು ಭಾರತ ಪಡೆದಿತ್ತು.ಭಾರತದ ಈ ಸಾಧನೆ ಇತರೆ ದೇಶಗಳಿಗೆ ಹೋಲಿಸಿದರೆ ಚಿಕ್ಕದಾದರೂ, ಆ ಎಲ್ಲಾ ದೇಶಗಳ ಗಮನವನ್ನೂ ಸೆಳೆಯಿತು. ಯಾವುದೇ ರೀತಿಯ ಅನುಕೂಲಗಳಿಲ್ಲದ ಪ್ರತಿಕೂಲ ಸನ್ನಿವೇಶದಲ್ಲಿ ಭಾರತೀಯ ವಿಜ್ಞಾನಿಗಳು ಮಾಡಿದ ಸಾಧನೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು. ಇದರ ಪರಿಣಾಮವಾಗಿ ಮುಂದಿನ 12 ವರ್ಷಗಳ ಕಾಲ ವಿವಿಧ ದೇಶಗಳು ಭಾರತಕ್ಕೆ ಸಹಾಯ ಮಾಡಲು ಮುಂದಾದವು. ಅಮೆರಿಕಾ, ಬ್ರಿಟನ್, ಫ್ರಾನ್ಸ್, ರಷ್ಯಾಗಳು ಸಹಾಯ ಮಾಡಿದವು. ಭಾರತ ಕೆಲವೇ ವರ್ಷಗಳಲ್ಲಿ ತುಂಬಾ ಕೇಂದ್ರವೊಂದರಿಂದಲೇ 350ಕ್ಕೂ ಹೆಚ್ಚು ರಾಕೆಟ್ಗಳನ್ನು ಉಡಾಯಿಸುವಂತಾಯ್ತು. ಈಗ 40 ವರ್ಷಗಳ ನಂತರ ಹಿಂದಿರುಗಿ ನೋಡಿದರೆ ಇಸ್ರೊದ ಸಾಧನೆ ಅಚ್ಚರಿ ಮೂಡಿಸುತ್ತದೆ. ತುಂಬಾದ ವಿಕ್ರಂ ಸಾರಾಭಾಯ್ ಸ್ಪೇಸ್ ಸೆಂಟರ್ ಉಪಗ್ರಹಗಳನ್ನು ಉಡಾಯಿಸುವ ಉಡಾವಣಾ ವಾಹನಗಳನ್ನು, ಟೆಲಿ ಕಮ್ಯೂನಿಕೇಷನ್, ಟಿವಿ ಪ್ರಸಾರ, ಹವಾಮಾನ ವರದಿಗೆ ಸಂಬಂಧಿಸಿದಂತೆ ಅನೇಕ ರೀತಿಯ ಉಪಗ್ರಹಗಳನ್ನು ದೇಶಕ್ಕೆ ನೀಡಿದೆ. ತುಂಬಾ ಈಕ್ವೆಟೋರಿಯಲ್ ರಾಕೆಟ್ ಲಾಂಚಿಂಗ್ ಸ್ಟೇಷನ್ (ಟಿಇಆರ್ಎಲ್ಎಸ್) ಅಸ್ತಿತ್ವಕ್ಕೆ ಬಂದಿದ್ದು ಹೀಗೆ. ಮುಂದೆ ಇಲ್ಲಿ ವಿಕ್ರಂ ಸಾರಾಭಾಯ್ ಸ್ಪೇಸ್ ಸೆಂಟರ್(ವಿಎಸ್ಎಸ್ಸಿ) ಅಸ್ತಿತ್ವಕ್ಕೆ ತರಲಾಯಿತು. ಭಾರತದ ಬಾಹ್ಯಾಕಾಶ ಅಭಿಯಾನದ ಯಾತ್ರೆ ಇಸ್ರೊ ಜನ್ಮ ತಾಳಿದ ಮೇಲೆ ಮತ್ತಷ್ಟು ಚುರುಕಾಯಿತು. ಅಂದು ಏನೂ ಇಲ್ಲದೆ ಆರಂಭವಾದ ಇಸ್ರೊ, ಇಂದು ಏನೆಲ್ಲಾ ಆಗಿ ಬೆಳೆದಿದೆ. ಇತರೆ ದೇಶಗಳಿಗೆ ಹೋಲಿಸಿದರೆ ಇಸ್ರೊಗೆ ಸಿಗುವ ಅನುದಾನ ತೀರಾ ಕಡಿಮೆ. ಇತರೆ ದೇಶದ ವಿಜ್ಞಾನಿಗಳಿಗೆ ಹೋಲಿಸಿದರೆ ನಮ್ಮ ವಿಜ್ಞಾನಿಗಳಿಗೆ ನೀಡುವ ಸಂಬಳ, ಸವಲತ್ತುಗಳೂ ತೀರಾ ಕಡಿಮೆ. ಆದರೆ ಎಲ್ಲಾ ಆಧುನಿಕ ಆಕಷ೵ಣೆ , ದೇಶ-ವಿದೇಶಗಳ ಉನ್ನತ ಸಂಸ್ಥೆಗಳ ಆಮಿಷಗಳನ್ನು ಮೀರಿ ಇಸ್ರೊ ವಿಜ್ಞಾನಿಗಳು ದಶಕಗಳಿಂದ ದೇಶ ಸೇವೆಗೆ ಕಟಿಬದ್ಧರಾಗಿದ್ದಾರೆ. ಇಂತಹ ಒಂದು ಧ್ಯೇಯ, ಹಠದಿಂದಾಗಿ ಇಂದು ಇಸ್ರೊ ಚಂದ್ರಯಾನವನ್ನೂ ಸಹ ಯಶಸ್ವಿಯಾಗಿ ಮುಗಿಸಿದೆ. ಮಿಲಿಯನ್, ಬಿಲಿಯನ್, ಟ್ರಿಲಿಯನ್ ಗಟ್ಟಲೆ ಖಚು೵ ಮಾಡುವ ದೇಶಗಳು, ತೀರಾ ಕಡಿಮೆ ವೆಚ್ಚದಲ್ಲಿ ಭಾರತ ಮಾಡಿರುವ ಚಂದ್ರಯಾನದ ಸಾಧನೆ ಕಂಡು ಬೆರಗಾಗುತ್ತಿವೆ. ಹ್ಯಾಟ್ಸ್ ಆಫ್ ಟು ಇಸ್ರೊ!ಇಂತಹ ಒಂದು ಸುದೀರ್ಘ ಪಯಣಕ್ಕೆ, ಬಾಹ್ಯಾಕಾಶ ಕ್ಷೇತ್ರಕ್ಕೆ ಭಾರತವನ್ನು, ವಿಜ್ಞಾನಿಗಳನ್ನು ಅಣಿಗೊಳಿಸಿ, ಮುಂದಿನ ಹಲವಾರು ದಶಕಗಳಿಗೆ ಬೇಕಾಗುವ ಯೋಜನೆಗಳ ರೂಪುರೇಷೆಗಳನ್ನು ಅಂದೇ ನೀಡಿದ್ದು ವಿಕ್ರಂ ಸಾರಾಭಾಯಿ ಹಾಗೂ ಹೋಮಿ ಜೆ ಬಾಬಾ. ನೈಕ್ ಅಪಾಚೆ ಹಾರಿಸುವುದಕ್ಕೂ ಒಂದು ವರ್ಷ ಮೊದಲೇ 1962ರಲ್ಲಿ ಹೋಮಿ ಜೆ ಬಾಬಾ, 'ಈಗ ನಾವು ವಿಶ್ವದ ಇತರೆ ದೇಶಗಳ ಜೊತೆ ಜೊತೆಗೇ ಇದ್ದೇವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅವರು ನಮಗಿಂತ ಕೇವಲ 4-5 ವರ್ಷ ಮುಂದಿದ್ದಾರಷ್ಟೆ. ಹೀಗಾಗಿ ಮುಂದಿನ 10-20 ವರ್ಷಗಳಲ್ಲಿ ನಾವು ಅವರಿಗೆ ಸಮಾನವಾಗಿ ಬೆಳೆಯಬೇಕು' ಎಂದಿದ್ದರು. ಆಗ ಸ್ಪುಟ್ನಿಕ್ ಉಡಾಯಿಸಿ ಕೇವಲ 5 ವರ್ಷಗಳಾಗಿದ್ದ ಹಿನ್ನಲೆಯಲ್ಲಿ ಅವರು ಈ ಮಾತು ಹೇಳಿದ್ದರು. ಈ ಮಾತಿನಲ್ಲಿ ಸತ್ಯವೂ ಇತ್ತು. ಒಂದು ರೀತಿ ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ನಿದರ್ಿಷ್ಟ ಗುರಿ ಸಿಕ್ಕದ್ದು, ಈ ಬಗ್ಗೆ ವಿಕ್ರಂ ಸಾರಾಭಾಯ್ ಹಾಗೂ ಹೋಮಿ ಜೆ. ಬಾಬಾ ಅವರ ಮನದಲ್ಲಿ ಹೊಸ ಯೋಚನೆಗಳು ಬಂದಿದ್ದು, ಯೋಜನೆಗಳು ರೂಪುಗೊಂಡದ್ದು ಸ್ಪುಟ್ನಿಕ್ ಉಡಾವಣೆಯಿಂದಲೇ ಎನ್ನಬಹುದು.

ಅವಧಿಯಲ್ಲಿ ಚಂದ್ರಯಾನ

ಅವಧಿ ಬ್ಲಾಗ್ನಲ್ಲಿ ನಮ್ಮ ಚಂದ್ರಯಾನ ಪುಸ್ತಕದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಬರೆದಿದ್ದಾರೆ. 'TV9 ನ ದೆಹಲಿ ವರದಿಗಾರ ಶಿವಪ್ರಸಾದ್ ತಮ್ಮ ‘ಅಲೆಯುವ ಮನ’ ಬ್ಲಾಗ್ ನಿಂದ ಪರಿಚಿತರು. ‘ಶಾಂತವಾಗು ಮನವೆ, ತಲ್ಲಣಿಸಬೇಡ’ ಎನ್ನುವ ಘೋಷ ವಾಕ್ಯ ಇವರ ಬ್ಲಾಗ್ ನದ್ದು. ಪತ್ರಿಕೋದ್ಯಮದ ನಿರಂತರ ಸವಾಲುಗಳಿಗೆ ತೆರೆದುಕೊಳ್ಳುವ ಪತ್ರಕರ್ತರಿಗೆ ಹೇಳಿಮಾಡಿಸಿದ ವಾಕ್ಯ. ತಮ್ಮ ಕೆಲಸದ ಮಧ್ಯೆಯೂ ಶಿವಪ್ರಸಾದ್ ‘ಚಂದ್ರಯಾನ’ ಪುಸ್ತಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಧ್ಯದಲ್ಲೇ ಪುಸ್ತಕ ಬಿಡುಗಡೆಯಾಗಲಿದೆ'ಎಂದು ಬರೆದು ನಮ್ಮ ಬೆನ್ನು ತಟ್ಟಿದ್ದಾರೆ. ಅವರ ವಿಶ್ವಾಸ ದೊಡ್ಡದು.
ಅವಧಿ ಬ್ಲಾಗ್ ಗೆ ಭೇಟಿ ನೀಡಲು ಇಲ್ಲಿ http://www.avadhi.wordpress.com/ ಕ್ಲಿಕ್ ಮಾಡಬಹುದು.

Sunday, December 21, 2008

ಚಂದ್ರಯಾನ


ಚಂದ್ರಯಾನ ಇಡೀ ದೇಶದ ಇತಿಹಾಸದಲ್ಲಿ ಒಂದು ಮಹತ್ವದ ತಿರುವು. ಈ ಯೋಜನೆ ನಮ್ಮ ಭಾರತಕ್ಕೆ, ಅದರಲ್ಲೂ ವಿಶೇಷವಾಗಿ ಯುವ ಮನಸ್ಸುಗಳಿಗೆ ಹೊಸ ಟಾನಿಕ್ ನೀಡಿದೆ. ಈ ಬಗ್ಗೆ ಚಿಂತನಗಂಗಾ ಪ್ರಕಾಶನ 'ಚಂದ್ರಯಾನ' ಎಂಬ ಪುಸ್ತಕ ಪ್ರಕಟಿಸುತ್ತಿದೆ. ಪುಸ್ತಕವನ್ನು ಟಿವಿ9 ದೆಹಲಿ ಮುಖ್ಯಸ್ಥರಾದ ಶಿವಪ್ರಸಾದ ಟಿ.ಆರ್. ಬರೆದುಕೊಟ್ಟಿದ್ದಾರೆ. ಇದಕ್ಕೆ ಇಸ್ರೊದ ಇಸ್ಟ್ರಾಕ್ ನಿದೇ೵ಶಕರಾದ ಎಸ್.ಕೆ.ಶಿವಕುಮಾರ್ ಅವರ ಮುನ್ನುಡಿಯಿದೆ. ಇದರಲ್ಲಿ ದೆಹಲಿಯ ವಿಜಯ ಕನಾ೵ಟಕ ಮಿತ್ರ ವಿನಾಯಕ ಭಟ್ ಮೂರೂರು, ಮೈಸೂರು ವಿ.ಕ.ಮಿತ್ರ ರಾಜೀವ್, ಬೆಂಗಳೂರು ವಿ.ಕ.ಸಹೋದರಿ ರಜನಿ, ಧಾರವಾಡದ ಪತ್ರಕರ್ತ ಮಿತ್ರ ವಿಭವ್ ಹಾಗೂ ದೆಹಲಿಯ ಕನಾ೵ಟಕ ವಾತಾ೵ಧಿಕಾರಿ ವೀರಣ್ಣ ಕಮ್ಮಾರ್ ಅವರೂ ಸಹ ಒಂದೊಂದು ಲೇಖನ ಬರೆದಿದ್ದಾರೆ. ಇನ್ನೊಂದು ವಾರದಲ್ಲಿ ಪುಸ್ತಕ ಹೊರ ಬರಲಿದೆ. ಪುಸ್ತಕವನ್ನು ನಮ್ಮ ಪ್ರೀತಿಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಅಪಿ೵ಸಿದ್ದೇವೆ. ಅವರೇ ಬಿಡುಗಡೆ ಮಾಡಬೇಕು ಎಂಬುದು ನಮ್ಮ ಲೇಖಕ ಮಿತ್ರರ ಆಸೆ. ಅವರು ದಿನಾಂಕ ನೀಡುವುದನ್ನು ಕಾಯುತ್ತಿದ್ದೇವೆ. ಶೀಘ್ರದಲ್ಲಿ ನಿಮಗೂ ದಿನಾಂಕ ತಿಳಿಸುತ್ತೇವೆ. ಅಂದಹಾಗೆ, ಪುಸ್ತಕದ ಮುಖಪುಟವನ್ನು ನಿಮಗಾಗಿ ಇಲ್ಲಿ ನೀಡಿದ್ದೇವೆ. ನಿಮ್ಮ ಪ್ರತಿಕ್ರಿಯೆ ತಿಳಿಸಿ.


ನಿಮ್ಮ ಗಮನಕ್ಕೆ: ಸೋಮವಾರ ನಿಮಗಾಗಿ ‘ಇಸ್ರೋ ವಿಜ್ಞಾನಿಗಳು 1960ರ ದಶಕದಲ್ಲಿ ಎಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದರು’ ಎಂಬ ವಿವರ ತಿಳಿಸುವ ಪುಸ್ತಕದ ಒಂದು ಚಾಪ್ಟರ್ ಇಲ್ಲಿ ಪ್ರಕಟವಾಗಲಿದೆ.

ಚಂದ್ರಯಾನದ ವಿಡಿಯೋಗಳನ್ನು ಇಲ್ಲಿ ವೀಕ್ಷಿಸಿ:

Chandrayaan 2008:


Chandrayaan-1 ISRO - India's Moon Mission Animation:


ESA's video on Chandrayaan-1:


Journey of Indian Space Research Organisation:


Chandrayaan-1 Successful launch:


Chandrayaan-1 launch:


Chandrayaan -1 First Indian Space mission - Moon:


Indian Space and Missile Technolgy:


INDIAN SPACE RESEARCH ORGANISATION: