Tuesday, April 21, 2009
ಜಲಿಯನ್ ವಾಲಾ ಬಾಗ್ ವಿಡಿಯೊಗಳು
Sunday, April 19, 2009
ಟೀವೀ ನೈನೂ ಮತ್ತು ’ಚಂದ್ರಯಾನ’ವೂ..
ನಿನ್ನೆ ರಾತ್ರಿ ೧೦:೩೦, ಅಪ್ಪನ ಫೋನಿಂದ ಮೆಸೇಜು ಬಂತು - "ನಿನ್ನನ್ನ TV9ನಲ್ಲಿ ನೋಡಿದೆವು! "
ಎದೆ ಧಸಕ್ ಎಂದಿತು. ಚಂದನದಲ್ಲೋ, ಕಸ್ತೂರಿಯಲ್ಲೋ, ಈ ಟೀವಿಯಲ್ಲೋ ನೋಡಿದೆ ಎಂದಿದ್ದರೆ ಏನಾಗುತ್ತಿರಲಿಲ್ಲ. ಆದರೆ ಹೇಳಿ ಕೇಳಿ ಅದು ಟೀವಿ ನೈನು! ಸುದ್ದಿಯನ್ನು ಮನರಂಜನೆಯಂತೆ ಕೊಟ್ಟು, ಮನರಂಜನೆಯನ್ನು ಅತಿರೇಕ ಮಾಡಿ, ಅತಿರೇಕವನ್ನು ಮಾಮೂಲಿನಂತೆ ದಿನವಿಡೀ ತೋರಿಸಿ ’ಉತ್ತಮ ಸಮಾಜಕ್ಕಾಗಿ’ ದುಡಿಯುತ್ತಿರುವ ಅಪರೂಪದ ವಾಹಿನಿ ಅದು. ಅಂದ ಮೇಲೆ ಗಾಬರಿಯಾಗದೇ ಇರುತ್ತದೆಯೇ. ಅವರ ಕ್ಯಾಮೆರಾ ಎಲ್ಲೆಲ್ಲಿ ಇರುತ್ತದೋ ಯಾರಿಗೆ ಗೊತ್ತು. ನಾವು ಹುಡುಗರು ಎಲ್ಲೆಲ್ಲೋ ನಿಂತಿರುತ್ತೇವೆ, ಏನೇನೋ ಮಾಡುತ್ತಿರುತ್ತೇವೆ. ಇನ್ಯಾವುದೋ ವರದಿಯ ಸಂದರ್ಭದಲ್ಲಿ ಅಕಸ್ಮಾತಾಗಿಯೋ , ಉದ್ದೇಶಪೂರ್ವಕವಾಗಿಯೋ ನಮ್ಮ ಮೇಲೆ ಕ್ಯಾಮೆರಾ ಕಣ್ಣು ಬಿದ್ದು ಅದು ಬೇರೆ ಏನೋ ಅರ್ಥ ಕೊಟ್ಟು ಬ್ರೇಕಿಂಗ್ ನ್ಯೂಸ್ ಆಗಿಹೋಯಿತಾ ಎಂದು ಹೆದರಿಕೆಯಾಯಿತು.
ರೆಹಮಾನ್, ಆ ಹುಡುಗ್ರು ಅಲ್ಲಿ ಎಷ್ಟೊತ್ತಿಂದ ನಿಂತಿದಾರೆ?
.................................
ಅವರ ಕೈಯಲ್ಲಿ ಏನೋ ವೈಟ್ ಕಲರ್ ವಸ್ತು ಇದೆಯಲ್ಲ, ಅದು ಏನೂಂತ ಹೇಳಕ್ಕಾಗತ್ತಾ?
.................................
ಅವರು ಇನ್ನೂ ಅಲ್ಲೇ ಎಷ್ಟು ಹೊತ್ತು ನಿಂತಿರ್ತಾರೆ ಅಂತ ಹೇಳ್ತೀರಾ
...............
ಹೀಗೆಲ್ಲಾ ಅವರ ವರದಿಗಾರ-ಸ್ಟುಡಿಯೋ ಮಧ್ಯೆ ಸಂಭಾಷಣೆ ಕಲ್ಪಿಸಿಕೊಂಡು ದಿಗಿಲಾದೆ. ಯಾವುದಕ್ಕೆ ಏನು ರೆಕ್ಕೆಪುಕ್ಕ ಸೇರಿಸಿ, ಮಸಾಲೆ ಅರೆದು, ಬಣ್ಣ ಹಚ್ಚಿ ತೋರಿಸಿಬಿಡುತ್ತಾರೋ ಯಾರಿಗೆ ಗೊತ್ತು ನಮ್ ಗ್ರಾಚಾರ! :)
ಕೆಲವರ್ಷಗಳ ಹಿಂದೆ ಹೀಗೇ ಆಗಿತ್ತು. ನಾನು ಮೊದಲು ಕೆಲಸ ಮಾಡುತ್ತಿದ್ದ ಕಂಪನಿಯ ಕ್ಯಾಂಪಸ್ಸಿನಲ್ಲೇ ಕಾಲ್ ಸೆಂಟರ್ ಒಂದಿತ್ತು. ಆಗ ಅದ್ಯಾವುದೋ ಕಾಲ್ ಸೆಂಟರ್ ಹುಡುಗಿಯನ್ನು ಕ್ಯಾಬ್ ಚಾಲಕನೊಬ್ಬ ಎತ್ತಾಕಿಕೊಂಡು ಹೋಗಿ ರೇಪ್ & ಕೊಲೆ ಮಾಡಿದ ಘಟನೆ ಹಸಿಹಸಿಯಾಗಿತ್ತು. ಕ್ರೈಂ ಡೈರಿ, ಸ್ಟೋರಿ ಮುಂತಾದ ಕ್ಯಾಮೆರಾಗಳು ಕಾಲ್ ಸೆಂಟರ್ ಗಳ ಹಿಂದೆ ಬಿದ್ದಿದ್ದವು. ನಮಗೂ ಎರಡನೇ ಪಾಳಿ ಇರುತ್ತಿದ್ದುದ್ದರಿಂದ ರಾತ್ರಿ ೧ ರ ವರೆಗೆ ಆಫೀಸಿನಲ್ಲೇ ಇರಬೇಕಾಗುತ್ತಿತ್ತು. ಆಗಾಗ ಗಾಳಿ ಸೇವನೆಗೆಂದು, ನಿದ್ದೆ ಬರದಿರಲೆಂದು ನಾವು ಹೊರಗೆ ಹೋಗುತ್ತಿದ್ದೆವು. ಅದೇ ಜಾಗಕ್ಕೆ ಕಾಲ್ ಸೆಂಟರಿನ ಹುಡುಗ ಹುಡುಗಿಯರೂ ಬರುತ್ತಿದ್ದರು.
ಆ ಹುಡುಗಿಯರ ಅಸ್ತವ್ಯಸ್ತ ಬಟ್ಟೆಗಳು, ಅವರು ಸೇದುತ್ತಿದ್ದ ಪ್ಯಾಕುಗಟ್ಟಲೇ ಸಿಗರೇಟುಗಳು, ಯಾವ ಮುಲಾಜೂ ಇಲ್ಲದಂತೆ ಹುಡುಗಿಯರ ಮೈಮೇಲೆ ಎಲ್ಲೆಲ್ಲೋ ಹರಿದಾಡುತ್ತಿದ್ದ ಹುಡುಗರ ಕೈಗಳು, ಮಬ್ಬುಗತ್ತಲಲ್ಲಿ ಪರಸ್ಪರ ದಾಹ ತೀರಿಸಿಕೊಳ್ಳುತ್ತಿದ್ದ ತುಟಿಗಳು, ಚಳಿಗಾಲದ ಹೀಟ್ ಟ್ರಾನ್ಸ್ ಫರ್ ಗಳು ಎಲ್ಲವನ್ನೂ ಸುತ್ತಮುತ್ತಲೇ ನೋಡುತ್ತಿದ್ದೆವು. ಎಥ್ನಿಕ್ ಡೇ ಹೆಸರಲ್ಲಿ ಕಾಲ್ ಸೆಂಟರ್ ಹುಡುಗೀರು ಸೀರೆ ಉಟ್ಟುಕೊಂಡು ಬಂದಾಗ ಮಾತ್ರ ನಮಗೆ ಬಹಳ ಸಂಕಟವಾಗುತ್ತಿತ್ತು. ಅದ್ಯಾಕೆ ನೆಟ್ಟಗೆ ಸೀರೆ ಉಟ್ಟುಕೊಂಡು ಬರುತ್ತಿರಲಿಲ್ವಾ ಅಂತೀರಾ? ಇಲ್ಲ ಹಾಗೇನಿಲ್ಲ , ಪಾಪ ಸರಿಯಾಗೇ ಸೀರೆ ಉಟ್ಟುಕೊಂಡೇ ಬಂದಿರ್ತಿದ್ರು, ಆದರೆ ಹುಡುಗೀರು ಸೀರೆ ಉಟ್ಟುಕೊಂಡು ಸಿಗರೇಟ್ ಸೇದುವುದನ್ನು ನೋಡೋಕಾಗೋಲ್ಲ ಕಣ್ರೀ. ಬೇಕಿದ್ರೆ ಜೀನ್ಸ್ ಟೀಶರ್ಟ್ ಅಥವಾ ಇನ್ನೇನನ್ನೋ ಹಾಕಿಕೊಂಡು ಸೇದಿದರೆ ಅದು ನೋಡೆಬಲ್.
ನೀವು ಹುಡುಗರು ಯಾವ ಬಟ್ಟೆ ಬೇಕಿದ್ರೂ ಹಾಕಿಕೊಂಡು ಏನ್ ಬೇಕಾದ್ರೂ ಮಾಡ್ತೀರಾ, ಹುಡುಗಿಯರಿಗೆ ಮಾತ್ರ ಕಟ್ಟು ಪಾಡು, ಶೋಷಣೆ, ದೌರ್ಜನ್ಯ ಅದು ಇದು ಅಂತ ಸ್ತ್ರೀವಾದಿಗಳು ಮೂದಲಿಸಿದರೂ ಪರ್ವಾಗಿಲ್ಲ, ಸೀರೆ ಉಟ್ಟುಕೊಂಡರೆ ಸಭ್ಯರೆಂಬ ಭಾವನೆಯೋ ಅಥವಾ ಸೀರೆ ಉಟ್ಟಿರುವವರೆಲ್ಲಾ ಅಮ್ಮಂದಿರಂತೆ ಎಂಬ ಮುಗ್ಧತೆಯೋ ಗೊತ್ತಿಲ್ಲ, ನಮಗೆ ಆ ಸೀರೆ ಮೇಲೆ ಚಿಕ್ಕಂದಿನಿಂದ ಏನೋ ಗೌರವ. ಇರ್ಲಿ ಬಿಡಿ. ಯಾರಿಗೂ ಏನೂ ಹೇಳುವ ಹಾಗಿಲ್ಲ, ಎಲ್ಲರೂ ೨೧ ನೇ ಶತಮಾನದವರರು, modern, forward, broad minded and independent. They know what is right and wrong. They don't want moral policing by anybody.
ಇದೇನು ಇಂಗ್ಲೀಷ್ ಬಂತು ಮಧ್ಯದಲ್ಲಿ !. ಹೋಗ್ಲಿ ಬಿಡಿ.. ಅದೆಲ್ಲ ವಿಷ್ಯ ಬೇಡ ಈಗ .
ನಮ್ಮ ತಲೆಬಿಸಿ ಇದ್ದದ್ದು ಟೀವಿ ಕ್ಯಾಮೆರಾಗಳ ಬಗ್ಗೆ ಮಾತ್ರ. ಅವರು ಎಲ್ಲೋ ಕ್ಯಾಮೆರಾ ಇಟ್ಟು ಫೋಕಸ್ ಮಾಡಿ ಕಾಲ್ ಸೆಂಟರ್ ಜನರ ಜೊತೆ ನಮ್ಮನ್ನೂ ಸೇರಿಸಿ ಟೀವಿನಲ್ಲಿ ತೋರಿಸಿ ಅದನ್ನು ನಮ್ಮೂರಲ್ಲೆಲ್ಲಾ ನೋಡಿ ಫಜೀತಿಯಾಗಿ ಬಿಡುತ್ತದೆ ಎಂಬ ಭಯ ಇತ್ತು. ಈ ಬ್ಲಾಗ್, ಇಂಟರ್ನೆಟ್ ನಲ್ಲೆಲ್ಲಾ ಏನೇ ಬರೆದುಕೊಂಡರೂ ಪರ್ವಾಗಿಲ್ಲ , ಯಾರೂ ಓದಲ್ಲ. ಆದರೆ ಟೀವಿ ಮಾತ್ರ ಹಾಗಲ್ಲ ನೋಡಿ. :)
ಯಾವುದೋ ವಿಷಯ ಹೇಳಲು ಹೋಗಿ ಏನೋ ಹೇಳುತ್ತಾ ಕೂತೆ. ನೀವೂ ಅದನ್ನು ಓದುತ್ತಾ ಕೂತಿರಿ. ಅಸಲು ವಿಷಯ ಇನ್ಮುಂದಿದೆ.
ಎಲೆಕ್ಟ್ರಾನಿಕ್ ಮಾಧ್ಯಮಗಳ ಈ ಕಾಲದಲ್ಲಿ ನಿನ್ನೆಯ ಸುದ್ದಿ ಇವತ್ತಿಗೆ ಹಳತಾಗಿ ಹೋಗಿರುತ್ತದೆ. ಏನಾದರೂ ಘಟನೆಗಳು ನೆಡೆದಾಗ ಅವು ಹಸಿ ಇರುವಾಗಲೇ ಅದನ್ನು ಸರಿಯಾಗಿ ಬಳಸಿಕೊಳ್ಳುವುದು ಒಳ್ಳೆಯದು. ಇಂಗ್ಲೀಷ್ ಬರವಣಿಗೆಯ ಜಗತ್ತು ಇದನ್ನು ಯಾವತ್ತೋ ಅಳವಡಿಸಿಕೊಂಡಿದೆ. ಆದರೆ ಕನ್ನಡ ಜಗತ್ತು ಈಗೀಗ ಅಳವಡಿಸಿಕೊಳ್ಳುತ್ತಿದೆ. (ಅಥವಾ ಮೊದಲೇ ಅಳವಡಿಸಿಕೊಂಡಿದ್ದರೆ ನನ್ನ ಅಜ್ಞಾನವೆಂದು ಮನ್ನಿಸಿ). ಅಮೆರಿಕಾದಲ್ಲಿ ಟ್ವಿನ್ ಟವರ್ ದುರಂತ ಆದಾಗ ಕೆಲವೇ ತಿಂಗಳುಗಳಲ್ಲಿ ಆ ಘಟನೆಯದ ವಿವರಗಳನ್ನೊಳಗೊಂಡ ಹಲವಾರು ದಪ್ಪ ದಪ್ಪ ಪುಸ್ತಕಗಳು ಬಂದವು. ಆ ಘಟನೆ ಇನ್ನೂ ಜನರ ಮನಸಲ್ಲಿ ಹಸಿಯಿದ್ದುದರಿಂದ ಪುಸ್ತಕಗಳು ಬಿಸಿಬಿಸಿಯಾಗಿ ಖರ್ಚಾದವು. ಕನ್ನಡದಲ್ಲೂ ಕೂಡ ಮೊನ್ನೆ ಮೊನ್ನೆ ದೈತ್ಯ ಬರಹಗಾರ ರವಿ ಬೆಳಗೆರೆಯವರು ಮುಂಬೈ ಘಟನೆಯನ್ನು ವಿಷಯವಾಗಿರಿಸಿಕೊಂಡು ’ಮೇಜರ್ ಸಂದೀಪ್ ಹತ್ಯೆ’ ಎಂಬ ಪುಸ್ತಕ ಬರೆದು ಬಿಡುಗಡೆ ಮಾಡಿದರು. ಇದು ಭಾವನೆಗಳನ್ನು encash ಮಾಡಿಕೊಳ್ಳುವುದು ಎಂದು ಕೆಲವರು ಟೀಕಿಸಿದರೂ ಕೂಡ ಅಂತಹ ಘಟನೆಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳಲು, ಜನರ ಮನಸಲ್ಲಿ ಇಳಿಯಲು ಸಹಕಾರಿಯಾಗುತ್ತವೆ.
ಈಗ ’ಚಂದ್ರಯಾನ’ದ ವಿಷಯಕ್ಕೆ ಬರೋಣ. ಕೆಲ ತಿಂಗಳುಗಳ ಹಿಂದೆ ನಮ್ಮ ವಿಜ್ಞಾನಿಗಳು ಚಂದ್ರಯಾನ-೧ ಯೋಜನೆಯನ್ನು ಯಶಸ್ವಿಯಾಗಿ ಕೈಗೊಂಡರು. ಇದು ಭಾರತದ ಹೆಮ್ಮೆಯ ಸಾಧನೆ. ನಿನ್ನೆ ’ಚಂದ್ರಯಾನ’ ಪುಸ್ತಕ ಬಿಡುಗಡೆಯಾಯಿತು. ಟೀವಿ ನೈನ್ ಉದ್ಯೋಗಿ ಶ್ರೀ ಶಿವಪ್ರಸಾದ್ ಮತ್ತು ಮಿತ್ರರು ಇಸ್ರೋ ಚಂದ್ರಯಾನದ ಯೋಜನೆಯ ವಿಷಯವನ್ನಿಟ್ಟುಕೊಂಡು ಪುಸ್ತಕ ಬರೆದಿದ್ದಾರೆ. ಕನ್ನಡ ಬರವಣಿಗೆ ಲೋಕದಲ್ಲಿ ಮಾಹಿತಿ ಸಾಹಿತ್ಯದ ಅಗತ್ಯತೆ ದೃಷ್ಟಿಯಿಂದ ಈ ಪುಸ್ತಕ ನಿಜವಾಗಿಯೂ ಒಂದು ಒಳ್ಳೆಯ ಸಾಮಗ್ರಿಯಾಗಿ ಹೊರಬಂದಿದೆ. ಈ ಪುಸ್ತಕದಲ್ಲಿ ಚಂದ್ರನ ಬಗ್ಗೆ ವಿವರಗಳಿವೆ, ಮತ್ತೊಮ್ಮೆ ದೇಶ ದೇಶಗಳ ನಡುವೆ space race ಶುರುವಾಗಲು ಕಾರಣವಾದ ’ಚಂದ್ರಯಾನ-೧’ ಯೋಜನೆಯನ್ನು ಹಂತ ಹಂತವಾಗಿ ವಿವರಿಸಲಾಗಿದೆ. ಮಾನವ ಚಂದ್ರನ ಮೇಲೆ ಏಕೆ ಅಷ್ಟು ಆಸಕ್ತಿ ತೋರಿಸುತ್ತಿದ್ದಾನೆ, ಚಂದ್ರನನ್ನು ಎಟುಕಿಸಿಕೊಂಡರೆ ಮನುಕುಲಕ್ಕೆ ಮುಂದೆ ಆಗುವ ಪ್ರಯೋಜನಗಳೇನು ಎಂಬುದಕ್ಕೆ ಇದುವರೆಗೂ ಜನಸಾಮಾನ್ಯರಿಗೆ ಗೊತ್ತೇ ಇರದ ರೋಚಕ ವಿಷಯಗಳಿವೆ. ಜೊತೆಗೆ ಭಾರತದ ಬಾಹ್ಯಾಕಾಶ, ಉಪಗ್ರಹ ಕ್ಷೇತ್ರದ ಹುಟ್ಟು ಬೆಳವಣಿಗೆಗಳ ವಿಷಯಗಳು ಮತ್ತು ವಿಶ್ವದ ಬಾಹ್ಯಾಕಾಶದ ಚಟುವಟಿಕೆಗಳ ವಿಷಯಗಳನ್ನೂ ಒಳಗೊಂಡಿದೆ. ಕೇರಳದ ’ತುಂಬಾ’ ಎಂಬ ಅತೀ ಕುಗ್ರಾಮವೊಂದರಲ್ಲಿ ಒಂದು ಹಳೇ ಚರ್ಚನ್ನೇ ಕಛೇರಿ ಮಾಡಿಕೊಂಡು ದನದ ಕೊಟ್ಟಿಗೆಯಲ್ಲಿ ಜೋಡಣೆ ಮಾಡಿ ಸೈಕಲ್ ನಲ್ಲಿ ಸಾಗಿಸಿ ಭಾರತದ ಮೊಟ್ಟ ಮೊದಲ ರಾಕೆಟನ್ನು ಆಕಾಶಕ್ಕೆ ಯಶಸ್ವಿಯಾಗಿ ಹಾರಿಸಿದ ಘಟನೆಯನ್ನು ಓದುತ್ತಾ ಹೋದಂತೆ ಅಕ್ಷರಶಃ ರೋಮಾಂಚನವಾಗುತ್ತದೆ. ದೇಶಕ್ಕೋಸ್ಕರ ಅಮೆರಿಕದ ಉನ್ನತ ಹುದ್ದೆಗಳನ್ನು ತೊರೆದು ಬಂದ ವಿಜ್ಞಾನಿಗಳು, ಇಸ್ರೋ(ISRO) ಸಂಸ್ಥೆಯ ಹುಟ್ಟು, ಬೆಳವಣಿಗೆ ಎಂತವರಲ್ಲೂ ಆಶ್ಚರ್ಯ, ಹೆಮ್ಮೆ ಮೂಡಿಸದೇ ಇರಲಾರದು. ಬಾಹ್ಯಾಕಾಶದ ಬಗ್ಗೆ ವಿವರಗಳು, ಗಗನಯಾತ್ರೆಯ ಒಳಹೊರಗು, ಅಮೆರಿಕಾ - ರಷ್ಯಾ ಶೀತಲ ಸಮರದಿಂದ ಶುರುವಾದ ಸ್ಪರ್ಧೆ, ಚಂದ್ರನ ಬಗ್ಗೆ ಇರುವ ಕಥೆಗಳು, ನಂಬಿಕೆಗಳು, ಇದಕ್ಕೆ ಸಂಬಂಧಪಟ್ಟ ಜಗತ್ತಿನ ಸ್ವಾರಸ್ಯಕರ ಘಟನೆಗಳು ಮುಂತಾದ ಹಲವು ವಿಷಯಗಳಿಂದ ಪುಸ್ತಕವು ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ.
ಚಂದ್ರಯಾನದಂತಹ ಯೋಜನೆಗಳ ಬಗ್ಗೆ ಜನರಲ್ಲಿ ಆಸಕ್ತಿ, ಗೌರವ ಮೂಡಿಸಲು, ಮಕ್ಕಳನ್ನು, ಯುವಕರನ್ನು ಇಂತಹ ಕ್ಷೇತ್ರಗಳ ಕಡೆಗೆ ಸೆಳೆಯಲು, ಸಂಶೋಧನಾ ಕೆಲಸಗಳ ಬಗ್ಗೆ ಆಸಕ್ತಿ ವಹಿಸುವಂತೆ ಮಾಡಲು ಇಂತಹ ಪುಸ್ತಕಗಳ ಅಗತ್ಯ ಬಹಳ ಇದೆ. ಪ್ರೌಢಶಾಲಾ ಮಟ್ಟದಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರಿಗೂ ಸಹಕಾರಿಯಾಗಬಲ್ಲ, ಅಗತ್ಯವಾಗಿ ಓದಬೇಕಾದ ಪುಸ್ತಕ ಇದು. ಅಬ್ದುಲ್ ಕಲಾಂರವರು ಇದನ್ನು ಮೊದಲೇ ಅನೌಪಚಾರಿಕವಾಗಿ ಬಿಡುಗಡೆ ಮಾಡಿ ಶಭಾಷ್ಗಿರಿ ಕೊಟ್ಟಿದ್ದಾರೆ. ಇಂತಹ ಹೆಚ್ಚು ಹೆಚ್ಚು ಪುಸ್ತಕಗಳು ಬರಲಿ ಎಂದು ಆಸೆ ಪಡೋಣ.
ಇದರ ಜೊತೆಗೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷ ದರ್ಶಿ ನೂರು ವರ್ಷಕ್ಕಿಂತಲೂ ಹಿರಿಯರಾದ ಸುಧಾಕರ ಚತುರ್ವೇದಿಯವರಿಂದ ಶಿವಪ್ರಸಾದ್ ಅವರೇ ಬರೆದಿರುವ ’ಜಲಿಯನ್ ವಾಲಾಬಾಗ್’ ಎಂಬ ಪುಸ್ತಕವೂ ಬಿಡುಗಡೆಯಾಯಿತು. ನಾನಿನ್ನೂ ಓದಿಲ್ಲ.
*******************
ಇಷ್ಟೆಲ್ಲಾ ಮಾತಾಡಿ ಈಗ ಟೀವಿನೈನ್ ನಲ್ಲಿ ಅಪ್ಪ ಅಮ್ಮ ನನ್ನನ್ನು ಕಂಡದ್ದು ಹೇಗೆ ಅಂತಲೇ ಹೇಳಲಿಲ್ಲ ಅಲ್ವೇ?
ನಿನ್ನೆ ಚಂದ್ರಯಾನ ಮತ್ತು ಜಲಿಯನ್ ವಾಲಾಬಾಗ್ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಆಗ ಟೀವಿನೈನ್ ಕ್ಯಾಮರಾ ಪ್ರೇಕ್ಷಕರ ಗುಂಪನ್ನು ತೋರಿಸುವಾಗ ಅಲ್ಲೆಲ್ಲೋ ಮಧ್ಯದಲ್ಲಿ ಕೂತಿದ್ದ ನನ್ನನ್ನು ಕೂಡ ಫೋಕಸ್ ಮಾಡಿಬಿಟ್ಟಿದೆ. ಪುಸ್ತಕ ಬಿಡುಗಡೆ ಸುದ್ದಿಯನ್ನು ರಾತ್ರಿ ’ಜಸ್ಟ್ ಬೆಂಗಳೂರು’ ಎಂಬ ಕಾರ್ಯಕ್ರಮದಲ್ಲಿ ತೋರಿಸಿದ್ದಾರೆ. ಮನೆಯಲ್ಲಿ ಅಪ್ಪ ಅಮ್ಮ ಅದನ್ನು ನೋಡುವಾಗ ನಾನೂ ಅವರ ಕಣ್ಣಿಗೆ ಬಿದ್ದಿದ್ದೇನೆ ಅಷ್ಟೆ.
ಫೋನ್ ಮಾಡಿ ಇಷ್ಟು ವಿಷಯ ತಿಳಿದುಕೊಂಡ ನಂತರ ನಿರಾಳವೆನಿಸಿ ನಿದ್ದೆ ಹೋದೆ. :)
Tuesday, April 14, 2009
ಜಲಿಯನ್ ವಾಲಾ ಬಾಗ್ ಬಗ್ಗೆ ಡಾ.ಸ್ವಾಮೀಜಿ ಬರೆದದ್ದು
ಈಗ ಜಲಿಯನ್ ವಾಲಾ ಬಾಗ್ ಬಗ್ಗೆ ಗುರುಗಳು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಕೇವಲ ನನಗೊಬ್ಬನಿಗೆ ಮಾತ್ರವಲ್ಲ, ವಿಜಯ ಕರ್ನಾಟಕ ಪತ್ರಿಕೆಯ ತಮ್ಮ ಬಿಸಿಲು ಬೆಳದಿಂಗಳು ಕಾಲಂನಲ್ಲಿ ಈ ಪುಸ್ತಕದ ಬಗ್ಗೆ ಬರೆಯುವ ಮೂಲಕ ಎಲ್ಲರಿಗೂ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅವರು ಬರೆಯುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಈಗ ಬರೆದು ಆಶೀರ್ವದಿಸಿದ್ದಾರೆ. ಗುರುಗಳಿಗೆ ನಮಸ್ಕಾರಗಳು.
ಬಿಸಿಲು ಬೆಳದಿಂಗಳು ಅಂಕಣದಲ್ಲಿ ಗುರುಗಳು ಬರೆದದ್ದು ಇಲ್ಲಿದೆ. ಓದಿ ನಿಮ್ಮ ಅನಿಸಿಕೆ ತಿಳಿಸಿ.
(ಇದನ್ನು ದೊಡ್ಡದಾಗಿ ನೋಡಲು ಲೇಖನದ ಮೇಲೆ ಕ್ಲಿಕ್ ಮಾಡಿ)
Wednesday, February 18, 2009
ಇಸ್ರೋಗೆ ಹೆಚ್ಚಿನ ಅನುದಾನ:
ಕೇಂದ್ರ ಬಜೆಟ್ ಗೆ ಎಲ್ಲೆಡೆಯಿಂದ ವ್ಯಾಪಕ ಟೀಕೆ ಎದುರಾಗಿದೆ. ಆದರೆ ಒಂದು ಸಂತಸದ ವಿಷಯ ಎಂದರೆ 'ಇಸ್ರೋ'ಗೆ ನೀಡುತ್ತಿದ್ದ ಅನುದಾನವನ್ನು ಶೇ. 27 ರಷ್ಟು ಹೆಚ್ಚಿಸಲಾಗಿದೆ.
ಈ ಅನುದಾನದಲ್ಲಿ ಹೆಚ್ಚಿನ ಹಣವನ್ನು ಚಂದ್ರಯಾನ ಯೋಜನೆಗಳಿಗೆ ಸೆಮಿ ಕ್ರಯೋಜೆನಿಕ್ ಎಂಜಿನ್ ನಿರ್ಮಾಣ, ಇನ್ನೂ ಭಾರೀ ಗಾತ್ರದ, ಭಾರದ ಉಪಗ್ರಹಗಳನ್ನು ಹಾರಿ ಬಿಡಲು ಅನುಕೂಲವಾಗುವ ಉಡಾವಣಾ ವಾಹನಗಳನ್ನು ನಿರ್ಮಿಸಲು ಬಳಸಲಾಗುವುದು.
ಕಳೆದ ವರ್ಷ ಇಸ್ರೋಗೆ 3,499 ಕೋಟಿ ನೀಡಲಾಗಿತ್ತು. ಈ ಬಾರಿ 960 ಕೋಟಿ ಹೆಚ್ಚಳ ಮಾಡಿ, ಒಟ್ಟು 4,459 ಕೋಟಿ ಹಣ ನೀಡಲಾಗುತ್ತಿದೆ. ಭವಿಷ್ಯದ ಯೋಜನೆಗಳಿಗೆ ಅವಶ್ಯವಾಗುವ ಸೆಮಿ ಕ್ರಯೋಜೆನಿಕ್ ಎಂಜಿನ್ ಅಭಿವೃದ್ಧಿಗೆ ಕಳೆದ ವರ್ಷ ಕೇವಲ 4.09 ಕೋಟಿ ನೀಡಲಾಗಿತ್ತು. ಈ ಬಾರಿ ಇದಕ್ಕಾಗಿ 75 ಕೋಟಿ ನೀಡಲಾಗುತ್ತಿದೆ. ಚಂದ್ರಯಾನಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಕಳೆದ ವರ್ಷ 88 ಕೋಟಿ ನೀಡಿದ್ದರೆ ಈ ವರ್ಷ 90 ಕೋಟಿ ಬಳಕೆ ಮಾಡಬಹುದು. ಎಸ್ ಎಲ್ ವಿ ಮಾರ್ಕ್ -3 ಉಡಾವಣಾ ವಾಹನ ಅಭಿವೃದ್ಧಿಗೆ 217 ಕೋಟಿ ನೀಡಲಾಗುತ್ತಿದೆ. ಇದು ಪೂರ್ತಿ ಸಿದ್ಧವಾದರೆ ಸಾಕಷ್ಟು ಭಾರದ ಉಪಗ್ರಹಗಳನ್ನು ಹಾರಿ ಬಿಡಬಹುದು.
ಇದರಲ್ಲಿ ಪ್ರಮುಖವಾಗಿ ಮಾನವ ಸಹಿತ ನೌಕೆ ಕಳುಹಿಸಲು ಬೇಕಾದ ಯೋಜನೆಗೆ ಚಾಲನೆ ನೀಡಿದ್ದು, ಇದಕ್ಕಾಗಿ 50 ಕೋಟಿ ನಿಗದಿ ಪಡಿಸಲಾಗಿದೆ.
Saturday, February 14, 2009
ಇಸ್ರೊದಿಂದ ಇಂಟರ್ ನ್ಯಾಷನಲ್ ಇಯರ್ ಆಫ್ ಅಸ್ಟ್ರಾನಮಿ.

Welcome,
2009 is being celebrated worldwide as the "International Year of Astronomy (IYA)". Indian Space Research Organisation (ISRO) is one of the organisational associates of IYA. The details of the national program on IYA activities in India is available at Inter University Centre for Astronomy & Astrophysics (IUCAA).
The Indian space program has always encouraged the study of the universe using space as a platform. The research work in the areas of cosmic rays, infrared, X-rays, gamma ray and solar physics were initially carried out using high altitude balloons and rockets. Today many of these studies are carried out using satellite experiments. Since 90s, opportunities to fly space science experiments have increased and numerous science payloads have been deployed as piggyback systems on several satellites from India. These include:
SROSS-series GRB experiments.
IXAE on IRS-P3.
SOXS on GSAT-2.
More recently, ISRO has undertaken development of dedicated satellites for space sciences. The first of these CHANDRAYAAN-1 was launched on October 22, 2008, marking India's entry into solar system exploration studies. CHANDRAYAAN-1 will soon be followed by a dedicated multi-wavelength astronomy satellite ASTROSAT, slated for 2010 launch.
ISRO's other near term activities in space astronomy include:
RT-2 on Photon-CORONAS satellite
TAUVEX on GSAT-4.
Aditya
CHANDRAYAAN-2
Tuesday, February 10, 2009
Chandrayaan a wake up call, says Annadurai
COIMBATORE: After 2010 there will be many moon missions undertaken by other countries. Anticipating this, we wanted to complete ours before they began. When we step into the moon tomorrow, we should be leaders among the other countries, Project Director of Chandrayaan – 1 M. Annadurai said here on Saturday. Responding to a felicitation given by Avinashilingam University for Women, he said the mission that was slated to be completed in seven years was accomplished in a record time of four years without any hitch.
“The Rs. 355 crore that was spent for the mission is not too high a cost for this kind of achievement. This is to show that we can achieve anything if we can work as a team. You need not have a background. Opportunities do not always knock at our doors. But, when they knock, we should be able to respond to them as a team. That will yield the best results,” Mr. Annadurai said.
Asking students to hold on to opportunities offered by the country, he said, “It is not a pride to go abroad and earn. India is throwing a red carpet of opportunities for you to grab. When India has given me the opportunity, it can give each one of you also”.
Terming the moon mission a “wake up” call not only for the U.S., but also for India, he said it was something the youth could look up to for doing more for the country. Since India could boast of a large youth population, it should serve as a productive human resource. He asked the students to be environmentally conscious. “Women have a more important role in this duty because they have to take on the role of teachers to their children at home. The role of a mother as a teacher is more significant than any other,” Mr. Annadurai said.
T.K. Shanmuganandam, Chancellor, Saroja Prabhakaran, Vice-Chancellor, and Lakshmi Santa Rajagopal, former Vice-Chancellor, of the university were among those who offered felicitations.
Monday, February 2, 2009
ಚಂದ್ರನ ಕಂದರಗಳು.
Wednesday, January 28, 2009
ಕಲಾಂರಿಂದ ಚಂದ್ರಯಾನ ಪುಸ್ತಕ ಬಿಡುಗಡೆ

ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಚಂದ್ರಯಾನ ಪುಸ್ತಕವನ್ನು ನವದೆಹಲಿಯಲ್ಲಿ ಜನವರಿ 27 ರಂದು ಬಿಡುಗಡೆ ಮಾಡಿದರು. ದಿ ವೀಕ್ ರೆಸಿಡೆಂಟ್ ಎಡಿಟರ್ ಸಚ್ಚಿದಾನಂದ ಮೂರ್ತಿ ಹಾಗೂ ಶಿವಪ್ರಸಾದ್ ಉಪಸ್ಥಿತರಿದ್ದಾರೆ.


ನವದೆಹಲಿ, ಜ. 27: ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು 1860 ರಷ್ಟು ಹಿಂದೆಯೇ ಕಾನ್ಸ್ಟಾಂಟಿನ್ ಟಿಶೆಲ್ಸ್ ಎಂಬ ವ್ಯಕ್ತಿ ನಿಖರವಾಗಿ ಊಹಿಸಿ ಹೇಳಿದ್ದ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಇಂದು ಇಲ್ಲಿ ಹೇಳಿದರು.
ಅವರು, ಪತ್ರಕರ್ತ ಶಿವಪ್ರಸಾದ್ ಬರೆದಿರುವ ಚಂದ್ರಯಾನ ಪುಸ್ತಕವನ್ನು ಮಂಗಳವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
ಕಾನ್ಸ್ಟಾಂಟಿನ್ ಕಿವುಡನಾಗಿದ್ದ. ಆದರೆ ಅಧ್ಯಯನದಲ್ಲಿ ಅತೀವ ಆಸಕ್ತಿ ಹೊಂದಿದ್ದ. ತನ್ನ ಅಧ್ಯಯನದಿಂದ ವಿವಿಧ ಸಮೀಕರಣಗಳನ್ನು ರಚಿಸಿದ್ದ. ಆ ಮೂಲಕ ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು ತಿಳಿಸಿದ್ದ. ಇಂದು ಆತನ ಊಹೆ ನಿಜವಾಗಿದೆ. ನಾವು ಚಂದ್ರನ ಮೇಲೆ ಹೊಗಿ ಬಂದಿದ್ದೇವೆ. ಹೀಗಾಗಿ ಚಂದ್ರಯಾನದ ಕಲ್ಪನೆಯ ಜನಕ ಕನ್ಸ್ಟಾಂಟಿನ್ ಎಂದರು.
ಪುಸ್ತಕ ಬಿಡುಗಡೆ ಮಾಡಿದ ನಂತರ ಪ್ರಥಮ ಪ್ರತಿಯನ್ನು ದಿ ವೀಕ್ ನ ಸ್ಥಾನಿಕ ಸಂಪಾದಕರಾದ ಕೆ.ಎಸ್. ಸಚ್ಚಿದಾನಂದ ಮೂರ್ತಿ ಅವರಿಗೆ ನೀಡಿದರು. ನಂತರ ಪುಸ್ತಕದಲ್ಲಿನ ವಿವಿಧ ಅಧ್ಯಾಯಗಳ ಬಗ್ಗೆ ಮಾಹಿತಿ ಪಡೆದರು.
ಚಂದ್ರಯಾನ ಉಡ್ಡಯನದ ನಂತರ ಅಮೇರಿಕಾದ ನಾಸಾ, ಒಬಾಮಾ ನೀಡಿದ್ದ ಪ್ರತಿಕ್ರಿಯೆ ಹಾಗೂ ಆ ಬಗ್ಗೆ ಮಾಧವನ್ ನಾಯರ್ ನೀಡಿದ್ದ ವಿವರಣೆ ಇರುವ ಅಧ್ಯಾಯವನ್ನು ಲೇಖಕ ಶಿವಪ್ರಸಾದ್ ಅವರಿಂದ ಓದಿಸಿ, ವಿವರಣೆ ಪಡೆದರು.
ನಂತರ ಮತ್ತೋರ್ವ ಪತ್ರಕರ್ತ ವಿನಾಯಕ್ ಭಟ್ ಬರೆದಿದ್ದ ದಿ ಗ್ರೇಟ್ ಮೂನ್ ಹೋಕ್ಸ್-1835 ಅಧ್ಯಾಯದ ಬಗ್ಗೆಯೂ ವಿವರಣೆ ಪಡೆದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿನಾಯಕ್ ಭಟ್ ಅವರಿಗೆ ಅವರ ಲೇಖನದಲ್ಲಿದ್ದ ಫೋಟೋ ತೋರಿಸಿ, ಈ ಬಗ್ಗೆ ವಿವರಣೆ ಕೇಳಿ ಆನಂದಿಸಿದರು.
'ಚಂದ್ರಯಾನ ಪುಸ್ತಕ ಬರೆಯಲು ಒಂದು ವರ್ಷ ತೆಗೆದುಕೊಂಡಿದ್ದೀರಿ. ಐತಿಹಾಸಿಕ ಯೋಜನೆಯಾದ ಚಂದ್ರಯಾನ ಕುರಿತ ಸಮಗ್ರ ವಿವರ ಇರುವ ಪುಸ್ತಕವನ್ನು ಹೊರ ತಂದಿರುವುದು ಉತ್ತಮ ಪ್ರಯತ್ನ' ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ 'ಪ್ರಜಾವಾಣಿ' ವಿಶೇಷ ಪ್ರತಿನಿಧಿ ದಿನೇಶ್ ಅಮಿನ್ ಮಟ್ಟು, 'ಡೆಕ್ಕನ್ ಹೆರಾಲ್ಡ್' ಸ್ಥಾನಿಕ ಸಂಪಾದಕ ಬಿ.ಎಸ್. ಅರುಣ್, 'ವಿಜಯ ಕರ್ನಾಟಕ' ದೆಹಲಿ ಪ್ರತಿನಿಧಿ ವಿನಾಯಕ್ ಭಟ್, ಕರ್ನಾಟಕ ವಾರ್ತಾ ಕೇಂದ್ರದ ಸಹಾಯಕ ನಿರ್ದೆಶಕ ವೀರಣ್ಣ ಕಮ್ಮಾರ, ಸುವರ್ಣ ಚಾನೆಲ್ ವರದಿಗಾರ ಪ್ರಶಾಂತ್ ನಾತೂ ಉಪಸ್ಥಿತರಿದ್ದರು.
Monday, January 26, 2009
ಪದ್ಮ ವಿಭೂಷಿತ ನಾಯರ್

ಚಂದ್ರಯಾನ ರೂವಾರಿ, ಇಸ್ರೊ ಅಧ್ಯಕ್ಷ ಮಾಧವನ್ ನಾಯರ್ ಅವರಿಗೆ ಭಾರತ ಸರಕಾರ 2009 ನೇ ಸಾಲಿನ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಚಂದ್ರಯಾನದ ಯಶಸ್ಸು ಇಡೀ ದೇಶದ ಯುವ ಮನಸ್ಸುಗಳ ಮೈ ಮನಸುಗಳನ್ನು ಬಡಿದೆಬ್ಬಿಸಿದೆ. ವಿದ್ಯಾರ್ಥಿಗಳನ್ನು ವಿಜ್ಞಾನದೆಡೆಗೆ ಸೆಳೆದಿದೆ. ಚಂದ್ರಯಾನದ ಯಶಸ್ಸು ಇಡೀ ದೇಶದ ವಿಜ್ಞಾನ ಕ್ಷೇತ್ರವನ್ನೇ ಬದಲಿಸಲಿದೆ. ಈ ಯೋಜನೆಯ ಯಶಸ್ಸು ಹೊತ್ತಿದ್ದ ನಾಯರ್ ಅವರಿಗೆ ಈ ಪ್ರಶಸ್ತಿ ದೊರೆತಿರುವುದು ಸಂತೋಷ. ಇದು ಇಸ್ರೊದ ಎಲ್ಲಾ ವಿಜ್ಞಾನಿಗಳಿಗೆ ಸಂದ ಗೌರವ.
ಮಾಧವನ್ ನಾಯರ್ ಹಾಗೂ ಚಂದ್ರಯಾನ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆಗಳು.
ಮಾಧವನ್ ನಾಯರ್ ಅವರ ಕುರಿತು ಹೆಚ್ಚಿನ ವಿವರಗಳಿಗೆ ಇಲ್ಲಿ http://www.isro.org/mnair/index.htm ಕ್ಲಿಕ್ ಮಾಡಿ.
Friday, January 16, 2009
ನಿಮಗೆ ೫೦೦ ರೂ. ಕೊಟ್ರೆ ಏನು ಮಾಡ್ತೀರಾ??
ನಮ್ಮಲ್ಲಿ 500 ರೂ. ಕೊಟ್ಟು ಥಂಡಾ ಬಿಯರ್ ಹೀರುವವರಿದ್ದಾರೆ.
ನಮ್ಮಲ್ಲಿ 500 ರೂ. ಟಿಪ್ಸ್ ಕೊಟ್ಟು ಎದ್ದು ಬರುವವರಿದ್ದಾರೆ.
ವ್ಯಾಲಂಟೈನ್ ಡೇ ಬಂದರೆ 500 ರೂ. ಏನು? 50,000 ಖರ್ಚು ಮಾಡುವವರಿಗೇನೂ ಕಡಿಮೆ ಇಲ್ಲ.
ಆದರೆ 500 ರೂ. ನಿಜವಾದ ಬೆಲೆ ಏನು?
ಈ 500 ರೂ. ಓದುವ ಆಸೆ ಇರುವ ಯಾವುದೋ ಬಡ ಮಗುವಿನ ಶಾಲೆಯ ಫೀಜ್ ಆಗಬಹುದು.
ಈ ಬಗ್ಗೆ ಚಿಂತನೆಗೆ ಹಚ್ಚುವ ತುಂಬಾ ಸರಳ,ಸುಂದರ ವಿಡಿಯೋ ಇಲ್ಲಿದೆ. ಇದನ್ನು ಪೂನಾದಲ್ಲಿರುವ ಸೆಂಟರ್ ಫಾರ್ ಕಮ್ಯುನಿಕೇಷನ್ ಅಂಡ್ ಡೆವಲಪ್ ಮೆಂಟ್ ಸ್ಟಡೀಸ್ ತಯಾರಿಸಿ ಇಂಟರ್ ನೆಟ್ ನಲ್ಲಿ ಹಾಕಿದೆ.
ನೀವೂ ನೋಡಿ.
ಇತರರಿಗೂ ತೋರಿಸಿ.
Tuesday, January 13, 2009
ಅಪರೂಪದ ಮಾಹಿತಿ ರವಾನಿಸುತ್ತಿರುವ ಚಂದ್ರ್ರಯಾನ:
ಚಂದ್ರನ 3-ಡಿ ಚಿತ್ರFriday, January 9, 2009
11 ಸಲಹೆಗಳು
ಆ 11 ಸಲಹೆಗಳ ಸಂಕ್ಷಿಪ್ತ ನೋಟ ಇಲ್ಲಿದೆ.
Sunday, January 4, 2009
Thursday, January 1, 2009
ಚಂದ್ರನ ಚಿತ್ರಗಳು
ಚಂದ್ರಯಾನದಲ್ಲಿರುವ ಟಿಎಂಸಿ ಉಪಕರಣ ತೆಗೆದ ಭೂಮಿಗೆ ಕಾಣದ ಚಂದ್ರನ ಮತ್ತೊಂದು ಬದಿಯ ಚಿತ್ರ.
ಎಚ್ ವೈ ಎಸ್ ಐ ಉಪಕರಣ ತೆಗೆದ ಚಂದ್ರನ ಮತ್ತೊಂದು ಬದಿಯ ಚಿತ್ರ.
ಚಂದ್ರನ ಮೇಲ್ಮೈಯ ಇನ್ನೂ ಮೂರು ಚಿತ್ರಗಳು.ಅಂದಹಾಗೆ ಈ ಚಿತ್ರದಲ್ಲಿ ಕಾಣುವ ಚಂದ್ರನ ಮೇಲ್ಮೈ ಭಾಗ ಎಷ್ಟು ಕಿ.ಮಿ.ಉದ್ದ ಇದೆ ಗೊತ್ತೆ?
ಕೇವಲ 395ಕಿ.ಮಿ.!!
Monday, December 29, 2008
'ಚಂದ' ಯಾನದ ಬಗ್ಗೆ ಚೆಂದದ ಪುಸ್ತಕ
'ಸ್ನೇಹಿತ, ಪತ್ರಕರ್ತ ಶಿವಪ್ರಸಾದ್ ಹೊಸ ಪುಸ್ತಕ ಬರೆದಿದ್ದಾನೆ ಹೆಸರು ಚಂದ್ರಯಾನ. ಚಂದಮಾಮನ ಬಯಸುವ ಮಗುವಿನ ಕನವರಿಕೆ, ಚಂದ್ರನೆಂಬ ಗ್ರಹದ ಬಗ್ಗೆ ವಿಜ್ಞಾನಿಯ ಕುತೂಹಲ, ಚಂದ್ರನಲ್ಲಿ ಪ್ರಿಯತಮೆ ಕಾಣುವ ಪ್ರಿಯಕರನ ಪ್ರೀತಿ, ಆಕಾಶದಲ್ಲೊಮ್ಮೆ ದಿಟ್ಟಿಸಿ ಚಂದ್ರನ ಇರುವಿಕೆ ಬಗ್ಗೆ ಖಚಿತಪಡಿಸಿಕೊಳ್ಳುವ ವೃದ್ಧರ ಬಯಕೆ ಎಲ್ಲವೂ ಇಲ್ಲಿ ದಾಖಲಾಗಿದೆ.
ಚಂದ್ರನ ಬಗ್ಗೆ ಬರೆಯಬಹುದಾದ ಎಲ್ಲವನ್ನೂ ಇಲ್ಲಿ ಅಕ್ಷರ ರೂಪದಲ್ಲಿ ಕಾಣಿಸಲಾಗಿದೆ. ಹೊಸದಿಲ್ಲಿಯಲ್ಲಿ ಟಿವಿ೯ ವರದಿಗಾರನಾಗಿರುವ ಶಿವಾ ಬಿಡುವು ದುರುಪಯೋಗ ಮಾಡದೆ ಸದುಪಯೋಗ ಮಾಡಿಕೊಂಡಿದ್ದಾನೆ ಎಂಬುದಕ್ಕೆ ಈ ಪುಸ್ತಕ ಸಾಕ್ಷಿ. ಅಂದ ಹಾಗೆ ಪುಸ್ತಕ ಸದ್ಯ ಮಾರುಕಟ್ಟೆಯಲ್ಲಿದೆ. ಎಲ್ಲ ಮಳಿಗೆಗಳಲ್ಲೂ ಲಭ್ಯ. ನೀವೂ ಕೊಂಡು ಓದಿ, ಸಂತಸಪಡಬಹುದು ಎಂದು ಬರೆದಿದ್ದಾರೆ.
ಥ್ಯಾಂಕ್ಸ್.
Monday, December 22, 2008
2. ತುಂಬಾ ತೀರದಲ್ಲಿ...
ಅಷ್ಟಕ್ಕೂ ತುಂಬಾವನ್ನೇ ಭಾರತದ ಪ್ರಥಮ ಉಡಾವಣಾ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಂಡದ್ದಾದರೂ ಏಕೆ? ಅದಕ್ಕೂ ಒಂದು ವೈಜ್ಞಾನಿಕ ಕಾರಣವಿದೆ. ಈ ಗ್ರಾಮ ಭೂಮಿಯ ಮ್ಯಾಗ್ನೆಟಿಕ್ ಈಕ್ವೇಟರ್ ವಲಯದಲ್ಲಿದೆ. ಇಲ್ಲಿ ಆಯಸ್ಕಾಂತೀಯ ಅಲೆಗಳ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ಇದು ವಾತಾವರಣದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲು ಹಾಗೂ ಉಪಹಗ್ರಹ ಉಡಾವಣೆಯಂತಹ ಕೆಲಸಗಳಿಗೆ ಅನುಕೂಲವಾಗುವಂತಿತ್ತು. ಇಂತಹ ಹತ್ತು ಹಲವಾರು ಅನುಕೂಲತೆಗಳು ತುಂಬಾವನ್ನು ಅಂತಾರಾಷ್ಟ್ರೀಯ ಮಟ್ಟದ ಸೌಂಡಿಂಗ್ ರಾಕೆಟ್ ಉಡಾವಣಾ ಸ್ಥಳವನ್ನಾಗಿ ಮಾರ್ಪಡಿಸಿವೆ. ಮೊದಲ ಯಶಸ್ಸಿನ ನಂತರ ಇಲ್ಲಿ ಫ್ರ್ರಾನ್ಸ್, ಜರ್ಮನಿ, ಜಪಾನ್, ರಷ್ಯಾ, ಬಲ್ಗೇರಿಯಾ ಸೇರಿದಂತೆ ವಿವಿಧ ದೇಶಗಳ ವಿಜ್ಞಾನಿಗಳು ಬಂದು ವೈಜ್ಞಾನಿಕ ಪರೀಕ್ಷೆಗಳಲ್ಲಿ, ಉಡಾವಣೆಗಳಲ್ಲಿ ಭಾಗವಹಿಸಿದ್ದಾರೆ.ತುಂಬಾ ಗ್ರಾಮವನ್ನೇ ಅಂತಿಮವಾಗಿ ಆಯ್ಕೆ ಮಾಡುವ ಮುನ್ನ ಸಾರಭಾಯ್ ಇನ್ನೂ ಹಲವಾರು ಗ್ರಾಮಗಳ ಪರಿಶೀಲನೆ ನಡೆಸಿದ್ದರು. ಯಾವ ಗ್ರಾಮವನ್ನು ಆಯ್ಕೆ ಮಾಡುವುದು ಎಂಬ ಗೊಂದಲದಲ್ಲಿ ಎಲ್ಲರೂ ಇದ್ದರು. ಕೊನೆಗೆ ಚಿಟ್ನಿಸ್ 'ತುಂಬಾ' ಎಂಬ ಗ್ರಾಮದ ಬಗ್ಗೆ ಹೇಳಿದರು. ಅಲ್ಲಿ ತುಂಬೆ ಹೂವಿನ ಗಿಡಗಳು ವಿಪರೀತ ಬೆಳೆಯುತ್ತವೆ. ಮಲಯಾಳಂನಲ್ಲಿ ತುಂಬಾ, ತಮಿಳಿನಲ್ಲಿ ತುಂಬೈ ಹಾಗೂ ಕನ್ನಡದಲ್ಲಿ ತುಂಬೆ ಅಂದರೆ ಬಿಳಿಯಾದ ಹೂವುಗಳನ್ನು ಬಿಡುವ ಔಷಧೀಯ ಗುಣಗಳುಳ್ಳ ಸಸ್ಯ. ಈ ಗಿಡಗಳಿಂದಾಗಿ ಆ ಗ್ರಾಮಕ್ಕೆ ತುಂಬಾ ಎಂಬ ಹೆಸರು ಬಂದಿದೆ. ಅಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲ. ಮೇಲಾಗಿ ಅಲ್ಲೊಂದು ಚಚರ್್ ಇದೆ. ಅದು ಕೂಡಾ ನಮಗೆ ತೊಡಕಾಗಬಹುದು ಎಂದು ಚಿಟ್ನಿಸ್ ಹೇಳಿದ್ದರು.ಆದರೆ ಸಾರಾಭಾಯಿಯವರ ಮನದಲ್ಲಿ ವಿಶ್ವಾಸವಿತ್ತು. ತುಂಬಾ ಗ್ರಾಮದ ವೀಕ್ಷಣೆಗೆ ಹೊರಟರು. ಅದೃಷ್ಟ ತುಂಬಾ ಗ್ರಾಮಕ್ಕಿತ್ತು. ಅಲ್ಲಿ ಭಾರತದ ಮಹತ್ತರ ವೈಜ್ಞಾನಿಕ ಸಂಸ್ಥೆಗೆ ಬೀಜಾಂಕುರವಾಗಲಿತ್ತು. ಎಲ್ಲವನ್ನೂ ವೀಕ್ಷಿಸಿದ ಸಾರಾಭಾಯ್ ಇದೇ ಸೂಕ್ತ ಸ್ಥಳ ಎಂದು ನಿರ್ಧರಿಸಿದ್ದರು. ಚಚರ್್ ಇರುವುದರಿಂದ ಯಾವುದೇ ಸಮಸ್ಯೆಯಾಗಲಿಲ್ಲ. ಬದಲಿಗೆ ವರದಾನವೇ ಆಯ್ತು!.ಅಂದು ತುಂಬಾ ಗ್ರಾಮ ಇದ್ದ ಸ್ಥಿತಿಯನ್ನು ನೋಡಿದ್ದವರು ಭಾರತೀಯ ವಿಜ್ಞಾನಿಗಳ ಆಯ್ಕೆಗೆ ನಗದೇ ಇರುತ್ತಿರಲಿಲ್ಲ. ಅಲ್ಲಿದ್ದದ್ದಾರು ಏನು? ವಿದೇಶದ ಉತ್ತಮ ಸಂಸ್ಥೆ, ಸ್ಥಳ, ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಮುತ್ತುನಾಯಗಂ, ಭಾವಸರ್, ಪ್ರೋ. ಚಿಟ್ನಿಸ್, ವಸಂತ್ ಗೌರಿಕರ್, ಅರವಮುದನ್ ಇವರು ಉತ್ಸಾಹದಿಂದ ದೇಶಕ್ಕಾಗಿ ಕೆಲಸ ಮಾಡೋಣ ಎಂದು ತುಂಬಾಗೆ ಬಂದಿಳಿದಾಗ ಅವರನ್ನು ಸ್ವಾಗತಿಸಿದ್ದಾರೂ ಏನು?ರಸ್ತೆಗಳೇ ಇಲ್ಲದೆ ಕುಗ್ರಾಮ. ನೂರಿನ್ನೂರು ಮೀನುಗಾರರ ಗುಡಿಸಲು ಬಿಟ್ಟರೆ ಅಸಲಿಗೆ ಮನೆಗಳೇ ಇಲ್ಲ. ಸಮುದ್ರ ತೀರದಲ್ಲಿ ಅಲ್ಲಲ್ಲಿ ಕಟ್ಟಿ ಹಾಕಿದ್ದ ಮೀನುಗಾರರ ದೋಣಿಗಳು. ಸುತ್ತಲೂ ಆಗಾಧವಾಗಿ ಬೆಳೆದು ನಿಂತು, ರಾತ್ರಿಯಲ್ಲಿ ಸರಬರ ಸದ್ದು ಮಾಡುತ್ತಾ ಹೆದರಿಕೆ ಹುಟ್ಟಿಸುವಂತಿದ್ದ ತೆಂಗಿನ ಮರಗಳು. ಸ್ನಾನ-ಶೌಚಾಲಯಗಳಿಗೂ ಪರದಾಡಬೇಕಾದ ಪರಿಸ್ಥಿತಿ. ನೆಟ್ಟಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ವಿದ್ಯುತ್ ದೀಪಗಳಿಲ್ಲ. ಸಂಚಾರಿ ವ್ಯವಸ್ಥೆ ಇಲ್ಲ. ಆ ಹಳ್ಳಿಗರಿಗೆ ಗ್ರಾಮದಲ್ಲಿದ್ದ ಪುಟ್ಟ ಚಚರ್್ ಏಕಮಾತ್ರ ಬೃಹತ್ ಕಟ್ಟಡ! ಅದರ ಪಕ್ಕದಲ್ಲೇ ಬಿಷಪ್ಪರ ಸಣ್ಣ ಮನೆ. ಇದರ ಹೊರತಾಗಿ ಅಲ್ಲಿ ಧಾರಳವಾಗಿ ಇದ್ದದ್ದು ಸಮುದ್ರದ ನೀರು! ಕೇಳಿ ಬರುತ್ತಿತ್ತು ಭೋರೆನ್ನುವ ಅಲೆಗಳ ಮೊರೆತ! ಇಷ್ಟೇ!!.ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮಾಡುವುದಾದರೂ ಹೇಗೆ? ಅಂತಹ ಸ್ಥಳದಲ್ಲಿ ಇರುವುದಾದರೂ ಎಷ್ಟು ದಿನ? ಆದರೆ ಭಾರತದ ಅದೃಷ್ಟ ಚನ್ನಾಗಿತ್ತು. ಅದಕ್ಕೆ ವಿಕ್ರಂ ಸಾರಾಭಾಯಿಯವರಂತಹ ವಿಜ್ಞಾನಿ ಇದ್ದರು. ವಿಕ್ರಂ ಸಾರಾಭಾಯಿಯವರನ್ನು ನಂಬಿ ಬಂದಿದ್ದ ಉತ್ಸಾಹಿ ವಿಜ್ಞಾನಿಗಳ ಪಡೆ ಇತ್ತು. ಅವರಿಗೆ ಇವೆಲ್ಲ ಅಡಚಣೆಗಳಾಗಿ ಕಾಣಲೇ ಇಲ್ಲ! ಇವರ ಉತ್ಸಾಹ, ದೇಶ ಪ್ರೇಮದಿಂದಾಗಿ, ಈ ಕುಗ್ರಾಮದಲ್ಲೇ ಭಾರತದ ಹೆಮ್ಮೆಯ ಸಂಸ್ಥೆಗೆ ಬೀಜಾಂಕುರವಾಗಲಿತ್ತು.ಅವರೆಲ್ಲ ಸೇರಿ ಬಿಷಪ್ಪರಿಗೆ ಮನವಿ ಮಾಡಿ ಅಲ್ಲಿದ್ದ ಚರ್ಚನ್ನೇ ವಿಜ್ಞಾನಿಗಳ ಮುಖ್ಯ ಕಚೇರಿಯನ್ನಾಗಿ ಮಾಡಿಕೊಂಡರು. ಬಿಷಪ್ಪರ ಮನೆ ವಕರ್್ಶಾಪ್ ಆಗಿ ಮಾಪರ್ಾಡಾಯ್ತು! ಆದರೆ ರಾಕೆಟ್ ಜೋಡಿಸುವುದಾದರೂ ಎಲ್ಲಿ? ಇದಕ್ಕಾಗಿ ಲ್ಯಾಬೋರೇಟರಿ ಎಲ್ಲಿಂದ ತರುವುದು? ಅದಕ್ಕೂ ನಮ್ಮ ವಿಜ್ಞಾನಿಗಳು ಪರಿಹಾರ ಕಂಡುಕೊಂಡುಬಿಟ್ಟರು! ಪಕ್ಕದಲ್ಲೇ ಇದ್ದ ದನದ ಕೊಟ್ಟಿಗೆಯೇ ಲ್ಯಾಬೋರೇಟರಿಯಾಯ್ತ!! ಯು.ಕೆ.ಯ ಆಟಮಿಕ್ ಎನಜರ್ಿ ಅಥಾರಿಟಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು, ಅದನ್ನು ಬಿಟ್ಟು ಭಾರತಕ್ಕೆ ಬಂದ ವಸಂತ್ ಗೌರೀಕರ್ ಮುಂದೊಮ್ಮೆ ಈ ಬಗ್ಗೆ ತಮ್ಮ ಅನುಭವ ಹೀಗೆ ಹೇಳಿಕೊಂಡಿದ್ದರು... 'ಕೆಲಸ ಬಿಟ್ಟು ಅಲ್ಲಿಂದ ಬಂದಾಗ ನಾವು ಕಠಿಣ ಹಾದಿಯಲ್ಲಿ ಸಾಗಬೇಕಿದೆ ಎಂಬ ಕಲ್ಪನೆ ಇತ್ತು. ಏನೂ ಇಲ್ಲದೆ ಕೆಲಸ ಆರಂಭಿಸಬೇಕು ಎಂದು ತಿಳಿದಿತ್ತು. ಆದರೆ ನಾನು ಬಂದಾಗ ಅಲ್ಲಿನ ಪರಿಸ್ಥಿತಿ ನೋಡಿ ಗಾಭರಿಯಾಗಿದ್ದೆ. ಅಂತಹ ಸನ್ನಿವೇಶ ಎದುರಿಸಲು ನಾನು ಮಾನಸಿಕವಾಗಿ ಸಿದ್ಧನಾಗಿರಲೇ ಇಲ್ಲ. ನಾವೆಲ್ಲ ಆ ಚಚರ್್ನೊಳಗೆ ಕುಳಿತು ಕೆಲಸ ಮಾಡುತ್ತಿದ್ದೆವು. ಅದರ ಪಕ್ಕದಲ್ಲೇ ದನದ ಕೊಟ್ಟಿಗೆ ಇತ್ತು. ಆಗ ನನಗೆ ನನ್ನ ಲ್ಯಾಬೋರೇಟರಿ ತೋರಿಸಿದರು. ಅದೇ ಆ ದನದ ಕೊಟ್ಟಿಗೆ! ಅಷ್ಟೇ ಅಲ್ಲ... ಈ ಲ್ಯಾಬೋರೇಟರಿ ಜೊತೆಗೆ ಬೋನಸ್ ಆಗಿ ಮತ್ತೊಂದು ಸ್ಥಳವನ್ನೂ ಸಹ ನಾನು ಬಳಕೆ ಮಾಡಬಹುದು ಎಂದು ತೋರಿಸಿದರು. ಅದು ದನಗಳ ಮೇವು ಸಂಗ್ರಹಿಸುವ ಕೊಠಡಿ. ಹೀಗೆ ನನ್ನ ಲ್ಯಾಬೋರೇಟರಿ ಸಿದ್ಧವಾಗಿತ್ತು!'.ವಿಕ್ರಂ ಸಾರಾಭಾಯಿಯವರ ವ್ಯಕ್ತಿತ್ವ ಅವರನ್ನು ಅತ್ಯಾಧುನಿಕ ಲ್ಯಾಬೋರೇಟರಿ ಬಿಟ್ಟು ಬಂದು ದನದ ಕೊಟ್ಟಿಗೆಯಲ್ಲಿ ಭಾರತದ ಪ್ರಥಮ ರಾಕೆಟ್ ನಿಮರ್ಾಣದಲ್ಲಿ ತೊಡಗುವಂತೆ ಮಾಡಿತ್ತು. ಹೀಗೆ ಎಲ್ಲ ತೊಡಕುಗಳನ್ನೂ ಮೀರಿ ನಮ್ಮ ವಿಜ್ಞಾನಿಗಳು ತಮ್ಮ ಕೆಲಸ ಆರಂಭಿಸಿದ್ದರು. ದಿನಗಳೆದಂತೆ ಅಲ್ಲಿನ ಪರಿಸರಕ್ಕೆ ಹೊಂದಿಕೊಂಡ ವಿಜ್ಞಾನಿಗಳು ರಾಕೆಟ್ ಜೋಡಣೆ ಆರಂಭಿಸಿದರು. 6 ತಿಂಗಳ ಶ್ರಮದ ನಂತರ ರಾಕೆಟ್ ಉಡಾವಣೆಗೆ ಸಿದ್ಧವಾಗಿತ್ತು. ತುಂಬಾ ಎಂಬ ಕುಗ್ರಾಮ ಸದ್ದಿಲ್ಲದೆ ಇತಿಹಾಸ ನಿಮರ್ಿಸಲು ಸಜ್ಜಾಗಿತ್ತು. ಇಡೀ ರಾಕೆಟ್ ಜೋಡಿಸುವುದು, ಅದರಲ್ಲಿ ಬೇಕಾದ ಸಾಧನಗಳನ್ನು ಅಳವಡಿಸುವುದೆಲ್ಲ ನಡೆದದ್ದು ತುಂಬಾದಲ್ಲಿದ್ದ ಸೇಂಟ್ ಮೇರಿ ಮೆಗ್ಡಾಲನ್ ಚಚರ್್ನಲ್ಲಿ. ಈಗ ಈ ಚಚರ್್ ಕೇಂದ್ರ ಸರಕಾರದ ಸುಪದರ್ಿಯಲ್ಲಿದೆ. ಇದನ್ನು ಇಸ್ರೊದ ಇತಿಹಾಸ ಸಾರುವ ಸುಂದರವಾದ ಮ್ಯೂಸಿಯಂ ಆಗಿ ಪರಿವತರ್ಿಸಿದ್ದಾರೆ. ನಿಮರ್ಾಣದಲ್ಲಿ ಅನೇಕ ತೊಂದರೆಗಳು, ಕೊನೆ ಕ್ಷಣದ ಆತಂಕಗಳನ್ನು ಎದುರಿಸಬೇಕಾಗಿತ್ತು. ಇಡೀ ರಾಕೆಟ್ನ ಭಾಗಗಳನ್ನು ನಿಗದಿತ ಸ್ಥಳಕ್ಕೆ
ಸಾಗಿಸಲು ಅವರೆಲ್ಲ ಹರ ಸಾಹಸ ಮಾಡಬೇಕಾಯಿತು. ಇದಕ್ಕಾಗಿ ಯಾವುದೇ ವಾಹನಗಳ ಸೌಲಭ್ಯ ಇರಲಿಲ್ಲ. ಆಗ ಅವರಿಗೆ ರಾಕೆಟ್ ಸಾಗಿಸಲು ಲಭ್ಯವಾದ ಏಕೈಕ ವಾಹನ ಸೈಕಲ್ಲು! ಆಗ ಸೈಕಲ್ಲುಗಳು ತೀರಾ ಅಪರೂಪ. ಸೈಕಲ್ ಇತ್ತು ಎಂದರೆ ಆತ ಇಡೀ ಗ್ರಾಮದ ಗಣ್ಯ ವ್ಯಕ್ತಿ ಎಂದೇ ಅರ್ಥ! ಸಿಕ್ಕ ಸೈಕಲ್ಲನ್ನೇ ಬಳಸಿ, ಅದರ ಮೇಲೆ ರಾಕೆಟ್ನ ವಿವಿಧ ಭಾಗಗಳನ್ನು ಉಡಾವಣಾ ಸ್ಥಳಕ್ಕೆ ಸಾಗಿಸಲಾಯಿತು. ಇಂದಿಗೂ ಆ ಫೋಟೋಗಳನ್ನು ನೋಡಿದರೆ ನಮ್ಮ ವಿಜ್ಞಾನಿಗಳು ಹೇಗೆ ಯಾವುದೇ ರೀತಿಯ ಹೆಚ್ಚಿನ ಸೌಲಭ್ಯಗಳಿಲ್ಲದೆ ಒಂದು ಧ್ಯೇಯ, ಉದ್ದೇಶಕ್ಕಾಗಿ ದುಡಿದಿದ್ದಾರೆ ಎಂದು ಹೆಮ್ಮೆಯಾಗದಿರದು.ಅಮೇರಿಕಾದಿಂದ ತರಿಸಿಕೊಂಡಿದ್ದ ರಾಕೆಟ್ನಲ್ಲಿ ಪ್ರೆಂಚ್ನಿಂದ ಆಮದು ಮಾಡಿಕೊಂಡಿದ್ದ ಪೇಲೋಡ್ ಸಾಧನ ಸರಿಯಾಗಿ ಕೂರುತ್ತಿರಲಿಲ್ಲ. ಹೀಗಾಗಿ ಹೆಚ್ಚು ವೆಲ್ಡಿಂಗ್ ಮಾಡಬೇಕಾಗಿ ಬಂದಿತ್ತು. ಈ ರೀತಿ ಹೆಚ್ಚು ವೆಲ್ಡ್ ಮಾಡುವುದು ಅಪಾಯಕಾರಿ ಎಂದು ರೇಂಜ್ ಟೆಸ್ಟ್ ಡೈರೆಕ್ಟರ್ ಎಚ್.ಜಿ.ಎಸ್.ಮೂತಿ ಎಚ್ಚರಿಸಿದ್ದರು. 'ನೀವು ಹೆಚ್ಚು ವೆಲ್ಡ್ ಮಾಡಿದ್ದೇ ಆದಲ್ಲಿ ಇಡೀ ಉಡಾವಣೆಯನ್ನೇ ಸ್ಥಗಿತಗೊಳಿಸಬೇಕಾಗಿ ಬರುತ್ತದೆ' ಎಂದು ಬಿಟ್ಟರು. ಕೊನೆಗೆ ಇದಕ್ಕೆ ಭಾವಸರ್ ಒಂದು ಪರಿಹಾರ ಸೂಚಿಸಿದರು. ಅದು ಅಲ್ಲಿದ್ದ ವಿಕ್ರಂ ಸಾರಾಭಾಯ್ ಹಾಗೂ ಕಲಾಂ ಅವರಿಗೂ ಒಪ್ಪಿಗೆಯಾಯಿತು. ಫ್ರೆಂಚ್ ಪೇಲೋಡ್ ಸಾಧನ ಅಮೆರಿಕಾದ ರಾಕೆಟ್ಗೆ ಹೊಂದಿಕೊಳ್ಳುವವರೆಗೆ ಅದನ್ನು ಉಜ್ಜಿ ಉಜ್ಜಿ ಸವೆಸುವುದೇ ಆ ಉಪಾಯ! ತಾಸುಗಟ್ಟಲೆ ಅದನ್ನು ಉಜ್ಜಿ, ರಾಕೆಟ್ಗೆ ಹೊಂದಿಕೊಳ್ಳುವಂತೆ ಮಾಡಲಾಯಿತು. ಇಡೀ ಯೋಜನೆ ಭಾರತದ ಮಟ್ಟಿಗೆ ಅತಿ ಮಹತ್ತರವಾದದ್ದು. ಅದರ ಫೋಟೋಗಳೆ ಇಲ್ಲದಿದ್ದರೆ ಹೇಗೆ? ಇದು ಭಾವಸರ್ ಅವರ ಚಿಂತೆ. ಫೋಟೋ ತೆಗೆಯಲಿಕ್ಕಾಗಿಯೇ ಅವರು ಕನ್ಯಾಕುಮಾರಿಯಲ್ಲಿದ್ದ ಕೇರಳ ಹೌಸ್, ಪಲಾಯಂಕೊಟ್ಟ, ಕೊಟ್ಟಾಯಂ, ಹಾಗೂ ಕೊಡೈಕೆನಾಲ್ಗಳಲ್ಲಿ ವಿವಿಧ ಕಾಲೇಜು ಕಟ್ಟಡಗಳ ಮೇಲೆ ಒಟ್ಟು ನಾಲ್ಕು ಸ್ಥಳಗಳನ್ನು ಗುರುತಿಸಿದ್ದರು. ಈ ನಾಲ್ಕೂ ಕ್ಯಾಮೆರಾಗಳು ಒಟ್ಟಿಗೆ ಫೋಟೋ ತೆಗೆಯಬೇಕಾಗಿತ್ತು. ಆದರೆ ಪರಸ್ಪರ ಸಂಪರ್ಕವಿಲ್ಲದೆ, ಉಡಾವಣಾ ಸಮಯ ತಿಳಿಸಿ, ಫೊಟೋ ತೆಗೆಯಲು ಸಿದ್ದವಾಗಿರಲು ಸೂಚನೆ ನೀಡುವುದಾದರೂ ಹೇಗೆ? ಆಗ ದೂರವಾಣಿ ಇಲಾಖೆ ತನ್ನ ಸಹಾಯ ಹಸ್ತ ಚಾಚಿತು. ಉಡಾವಣೆಗೂ ಒಂದು ವಾರ ಮೊದಲಿನಿಂದಲೇ ಆಗಸವನ್ನು ಕುತೂಹಲದಿಂದ ಪರೀಕ್ಷಿಸಲಾಗುತ್ತಿತ್ತು. ಮಳೆ ಸುರಿಯಬಹುದೇ? ಮೋಡ ಕವಿಯಬಹುದೇ ಎಂದು ಪರಿಸ್ಪರ ಚಚರ್ಿಸುತ್ತಿದ್ದರು. ಆಗಿನ್ನೂ ದಿಕ್ಕು-ದೆಸೆ ತಿಳಿಸುವ ರಾಡಾರ್ಗಳಾಗಲಿ, ಕಂಪ್ಯೂಟರ್ ನಿಯಂತ್ರಿತ ಉಪಕರಣಗಳಾಗಲಿ, ಇರಲಿಲ್ಲ. ಹೀಗಾಗಿ ರೇಂಜ್ ಟೆಸ್ಟ್ ಡೈರೆಕ್ಟರ್ ಎಚ್.ಜಿ.ಎಸ್.ಮೂತರ್ಿ ಒಂದು ನಿಗದಿತ ದಿಕ್ಕನ್ನು ಗುರುತಿಸಿ, ಆ ಕೋನದಿಂದಲೇ ರಾಕೆಟ್ ಉಡಾಯಿಸುವುದು ಎಂದು ಸೂಚಿಸಿದ್ದರು. ಇದರಿಂದ ಒಂದು ವೇಳೆ ಪರೀಕ್ಷೆ ವಿಫಲವಾಗಿ ರಾಕೆಟ್ ಬಿದ್ದಲ್ಲಿ, ಅದು ಜನ ವಸತಿ ಪ್ರದೇಶ ಅಥವಾ ಮನೆಗಳ ಮೇಲೆ ಬೀಳದಿರಲಿ ಎಂದು ಈ ಎಚ್ಚರಿಕೆ ತೆಗೆದುಕೊಳ್ಳಲಾಗಿತ್ತು. ಈ ಎಲ್ಲಾ ಅಡ್ಡಿ, ಆತಂಕಗಳನ್ನು ಮೀರಿ, ಉಡಾವಣೆ ಯಶಸ್ವಿಯಾಗಿತ್ತು. ಕ್ಯಾಮೆರಾದಲ್ಲಿ ಕೂಡ ಫೋಟೋಗಳನ್ನು ಸೆರೆ ಹಿಡಿಯಲಾಗಿತ್ತು. ಅನೇಕರ ಶ್ರಮ, ಸಹಕಾರದಿಂದ ಭಾರತದ ಪ್ರಥಮ ರಾಕೆಟ್ ಉಡಾವಣೆ ಯಶಸ್ವಿಯಾಗಿತ್ತು.
ಅವಧಿಯಲ್ಲಿ ಚಂದ್ರಯಾನ
ಅವಧಿ ಬ್ಲಾಗ್ ಗೆ ಭೇಟಿ ನೀಡಲು ಇಲ್ಲಿ http://www.avadhi.wordpress.com/ ಕ್ಲಿಕ್ ಮಾಡಬಹುದು.
Sunday, December 21, 2008
ಚಂದ್ರಯಾನ

ಚಂದ್ರಯಾನ ಇಡೀ ದೇಶದ ಇತಿಹಾಸದಲ್ಲಿ ಒಂದು ಮಹತ್ವದ ತಿರುವು. ಈ ಯೋಜನೆ ನಮ್ಮ ಭಾರತಕ್ಕೆ, ಅದರಲ್ಲೂ ವಿಶೇಷವಾಗಿ ಯುವ ಮನಸ್ಸುಗಳಿಗೆ ಹೊಸ ಟಾನಿಕ್ ನೀಡಿದೆ. ಈ ಬಗ್ಗೆ ಚಿಂತನಗಂಗಾ ಪ್ರಕಾಶನ 'ಚಂದ್ರಯಾನ' ಎಂಬ ಪುಸ್ತಕ ಪ್ರಕಟಿಸುತ್ತಿದೆ. ಪುಸ್ತಕವನ್ನು ಟಿವಿ9 ದೆಹಲಿ ಮುಖ್ಯಸ್ಥರಾದ ಶಿವಪ್ರಸಾದ ಟಿ.ಆರ್. ಬರೆದುಕೊಟ್ಟಿದ್ದಾರೆ. ಇದಕ್ಕೆ ಇಸ್ರೊದ ಇಸ್ಟ್ರಾಕ್ ನಿದೇಶಕರಾದ ಎಸ್.ಕೆ.ಶಿವಕುಮಾರ್ ಅವರ ಮುನ್ನುಡಿಯಿದೆ. ಇದರಲ್ಲಿ ದೆಹಲಿಯ ವಿಜಯ ಕನಾಟಕ ಮಿತ್ರ ವಿನಾಯಕ ಭಟ್ ಮೂರೂರು, ಮೈಸೂರು ವಿ.ಕ.ಮಿತ್ರ ರಾಜೀವ್, ಬೆಂಗಳೂರು ವಿ.ಕ.ಸಹೋದರಿ ರಜನಿ, ಧಾರವಾಡದ ಪತ್ರಕರ್ತ ಮಿತ್ರ ವಿಭವ್ ಹಾಗೂ ದೆಹಲಿಯ ಕನಾಟಕ ವಾತಾಧಿಕಾರಿ ವೀರಣ್ಣ ಕಮ್ಮಾರ್ ಅವರೂ ಸಹ ಒಂದೊಂದು ಲೇಖನ ಬರೆದಿದ್ದಾರೆ. ಇನ್ನೊಂದು ವಾರದಲ್ಲಿ ಪುಸ್ತಕ ಹೊರ ಬರಲಿದೆ. ಪುಸ್ತಕವನ್ನು ನಮ್ಮ ಪ್ರೀತಿಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಅಪಿಸಿದ್ದೇವೆ. ಅವರೇ ಬಿಡುಗಡೆ ಮಾಡಬೇಕು ಎಂಬುದು ನಮ್ಮ ಲೇಖಕ ಮಿತ್ರರ ಆಸೆ. ಅವರು ದಿನಾಂಕ ನೀಡುವುದನ್ನು ಕಾಯುತ್ತಿದ್ದೇವೆ. ಶೀಘ್ರದಲ್ಲಿ ನಿಮಗೂ ದಿನಾಂಕ ತಿಳಿಸುತ್ತೇವೆ. ಅಂದಹಾಗೆ, ಪುಸ್ತಕದ ಮುಖಪುಟವನ್ನು ನಿಮಗಾಗಿ ಇಲ್ಲಿ ನೀಡಿದ್ದೇವೆ. ನಿಮ್ಮ ಪ್ರತಿಕ್ರಿಯೆ ತಿಳಿಸಿ.
ನಿಮ್ಮ ಗಮನಕ್ಕೆ: ಸೋಮವಾರ ನಿಮಗಾಗಿ ‘ಇಸ್ರೋ ವಿಜ್ಞಾನಿಗಳು 1960ರ ದಶಕದಲ್ಲಿ ಎಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದರು’ ಎಂಬ ವಿವರ ತಿಳಿಸುವ ಪುಸ್ತಕದ ಒಂದು ಚಾಪ್ಟರ್ ಇಲ್ಲಿ ಪ್ರಕಟವಾಗಲಿದೆ.
ಚಂದ್ರಯಾನದ ವಿಡಿಯೋಗಳನ್ನು ಇಲ್ಲಿ ವೀಕ್ಷಿಸಿ:
Chandrayaan-1 ISRO - India's Moon Mission Animation:
ESA's video on Chandrayaan-1:
Journey of Indian Space Research Organisation:
Chandrayaan-1 Successful launch:
Chandrayaan-1 launch:
Chandrayaan -1 First Indian Space mission - Moon:
Indian Space and Missile Technolgy:
INDIAN SPACE RESEARCH ORGANISATION:



